Bangalore Power Cut: ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಯಾವ-ಯಾವ ಏರಿಯಾ? ಇಲ್ಲಿದೆ ವಿವರ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ನಿಂದ ಬೆಂಗಳೂರಿನಲ್ಲಿ ನಿರ್ವಹಣಾ ಕಾರ್ಯಗಳು ನಡೆಯುವುದರಿಂದ ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಇದರಲ್ಲಿ ನಿಮ್ಮ ಏರಿಯಾ ಇದೆಯಾ?
ಬೆಂಗಳೂರು, ಆ.17: ಬೆಸ್ಕಾಂ(Bescom) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL)ನ ನಿರ್ವಹಣಾ ಕಾರ್ಯಗಳು ಇಂದು ನಡೆಯಲಿವೆ. ಈ ಹಿನ್ನೆಲೆ ಇಂದು ಅಂದರೆ ಗುರುವಾರ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಕಡೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗಿನ ಸಮಯದಲ್ಲಿ ಯಾವಾಗ ಬೇಕಾದರೂ ಕರೆಂಟ್ ಕಟ್ ಆಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ(Bangalore Power Cut).
ತ್ರೈಮಾಸಿಕ ನಿರ್ವಹಣೆ, ಕೇಬಲ್ ಹಾನಿ ಸರಿಪಡಿಸುವುದು, ಜಲಸಿರಿ 24×7 ನೀರು ಸರಬರಾಜು ಕೆಲಸ, ಕಂಬಗಳನ್ನು ನೇರಗೊಳಿಸುವುದು ಸೇರಿ ಹಲವು ಕಾಮಗಾರಿಗಳನ್ನು ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಇಂದು ಹಮ್ಮಿಕೊಂಡಿದೆ. ಹೀಗಾಗಿ ಇಂದು ಅಂದರೆ ಗುರುವಾರ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬಹುತೇಕ ಕಾಮಗಾರಿಗಳು ನಡೆಯಲಿವೆ. ಹೀಗಾಗಿ ಈ ಸಮಯದಲ್ಲಿ ಕೆಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಹಲ್ಲೆ; ಆರೋಪಿ ಬಂಧನ
ಆಗಸ್ಟ್ 17ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಇಂದು ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ತೋಳಹುಣಸೆ, ಕುರ್ಕಿ, ಕಬ್ಬೂರು, ಗೋಪನಾಳು, ಕಂದಗಲ್ಲು, ಅತ್ತಿಗೆರೆ, ಬಾಡ, ಹನುಮನಹಳ್ಳಿ, ತೋಳಹುಸೆ, ಆರ್.ಜಿ.ಹಳ್ಳಿ, ರಂಗನಾಥ ಅಂಗೋಡು, ಹೆಬ್ಬಾಳ, ನೀರ್ತಾಡಿ, ಶಿವಪುರ, ಹಲವರ್ಗಿ, ಹಲವರ್ತಿ, ಶಿವಾಪುರ, ಗ್ರಾ.ಪಂ.ಗಳ ಎಲ್ಲಾ 11 ಕೆ.ವಿ. ಶ್ಯಾಗಲೆ, ಹರಿಹರ ಟೌನ್, ದೇವರಬೆಳಕೆರೆ ವ್ಯಾಪ್ತಿ, ಬೆಳ್ಳಾವಿ, ದೊಡ್ಡೇರಿ, ಸಿಂಗಿಪುರ, ಬುಗುಡನಹಳ್ಳಿ, ಚೆನ್ನೇನಹಳ್ಳಿ, ಬಾಣಾವರ, ಅಗಲಗುಂಟೆ ಹೇಮಾವತಿ, ಸುಗುಣ, ಅಗಳಗುಂಟೆ ಹೇಮಾವತಿ, ಸುಗುಣ, ಡೊಳ್ಳಾಪುರ, ಚಿಮ್ಮಲಾಪುರ, ಚಿಮ್ಮಲಾಪುರ, ತಿಮ್ಮಲಪುರ ಗ್ರಾಮಗಳ ವ್ಯಾಪ್ತಿಯ ಕೋಡಿಹಳ್ಳಿ, ಗೋಣಿವಾಡ ಮತ್ತು ಸಮೀಪದ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ. ಅಲ್ಲದೇ ಮಾವಿನಕುಂಟೆ, ಮಾರನಹಟ್ಟಿ, ದೊಡ್ಡಸರಂಗಿ, ಹೊಸಳ್ಳಿ, ಕಂಬತ್ತನಹಳ್ಳಿ/ಅದಲಾಪುರ, ಚಿಕ್ಕಸರಂಗಿ, ಹೇತೇನಹಳ್ಳಿ, ನಂದಿಹಳ್ಳಿ, ಸಮುದ್ರನಹಳ್ಳಿ, ವೊಕ್ಕೋಡಿ, ಹೆಗ್ಗೆರೆ, ಎಸ್‍ಎಸ್‍ಎಂಸಿ, ಮೂಡಿಗೆರೆ, ಗೊಲ್ಲಳ್ಳಿ ಕಾಲೋನಿ, ಭೀಮಸಂದ್ರ ಟೌನ್, ಕನ್ನೇನಹಳ್ಳಿಯಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ