AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಎಡವಟ್ಟು; ಮನೆ ಜಪ್ತಿ ಮಾಡುವಾಗ ಮನೆಯೊಳಗೆ ಯುವಕ ಲಾಕ್, ಮುಂದೇನಾಯ್ತು?

ಬೆಂಗಳೂರಿನಲ್ಲಿ ಮನೆ ಜಪ್ತಿ ಮಾಡುವ ವೇಳೆ ಬ್ಯಾಂಕ್ ಸಿಬ್ಬಂದಿ ಎಡವಟ್ಟು. ಮನೆ ಜಪ್ತಿ ವೇಳೆ ಬಾಡಿಗೆ ಮನೆಯಲ್ಲಿ ಮಲಗಿದ್ದ ಯುವಕ ಕೂಡ ಲಾಕ್​​ ಆಗಿದ್ದಾನೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದ್ಯ ತಡರಾತ್ರಿ ಪೊಲೀಸರ ನೆರವಿಂದ ಮಗನನ್ನು ಹೊರತರಲಾಗಿದೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ವಕೀಲ ಹೇಮಂತ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಎಡವಟ್ಟು; ಮನೆ ಜಪ್ತಿ ಮಾಡುವಾಗ ಮನೆಯೊಳಗೆ ಯುವಕ ಲಾಕ್, ಮುಂದೇನಾಯ್ತು?
ವಸ್ತುಗಳನ್ನು ಆಚೆ ಹಾಕಿ ಮನೆ ಸೀಚ್ ಮಾಡಿದ ಬ್ಯಾಂಕ್ ಸಿಬ್ಬಂದಿ
ಶಿವಪ್ರಸಾದ್​ ಬಿ.
| Edited By: ಆಯೇಷಾ ಬಾನು|

Updated on:Aug 17, 2023 | 8:25 AM

Share

ಬೆಂಗಳೂರು, ಆ.16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಮನೆ ಜಪ್ತಿ ಮಾಡುವ ವೇಳೆ ಬ್ಯಾಂಕ್ ಸಿಬ್ಬಂದಿ(Tumkur Veerashaiva Cooperative Bank) ಎಡವಟ್ಟು ಮಾಡಿದ್ದಾರೆ. ಮನೆ ಮಾಲೀಕ ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದು ಜಪ್ತಿ ವೇಳೆ ಬಾಡಿಗೆ ಮನೆಯಲ್ಲಿ ಮಲಗಿದ್ದ ಯುವಕ ಕೂಡ ಲಾಕ್​​ ಆಗಿದ್ದಾನೆ. ಕೆಂಗೇರಿಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ.

ಪುಟ್ಟಪ್ಪ, ಗಾಯಿತ್ರಿ ಎಂಬುವವರು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್​​ನಲ್ಲಿ 2 ಕೋಟಿ ಸಾಲ ಮಾಡಿ ಕೆಂಗೇರಿ ಉಪನಗರದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿದ್ದರು. ಮೂರು ಅಂತಸ್ತಿನ ಒಂದು ಮನೆಯಲ್ಲಿ ಮಾಲೀಕರು ನೆಲೆಸಿದ್ದರು. ಉಳಿದ ಎರಡು ಮನೆಗಳನ್ನು ಬಾಡಿಗೆಗೆ ಬಿಡಲಾಗಿತ್ತು. ನಿನ್ನೆ(ಆ.16) ಸಂಜೆ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಬಂದಿದ್ದ ಬ್ಯಾಂಕ್ ಸಿಬ್ಬಂದಿ ಮೂರು ಮನೆಗಳಿಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ. ಆದ್ರೆ ಮನೆ ಜಪ್ತಿ ಮಾಡುತ್ತಿದ್ದ ವೇಳೆ ಬಾಡಿಗೆ ಮನೆಯಲ್ಲಿಯೇ ಮಲಗಿದ್ದ ಬಾಡಿಗೆದಾರ ಕೂಡ ಲಾಕ್ ಆಗಿದ್ದಾನೆ. ಬಾಡಿಗೆದಾರ ಮನೆಯಲ್ಲಿರುವುದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿ ಸೀಲ್ ಹಾಕಿದ್ದಾರೆ. ಮನೆಯಲ್ಲಿದ್ದವರು ಹೊರಕಳಿಸದೆ ಬ್ಯಾಂಕ್​ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದು ಮಗನನ್ನು ಮನೆಯ ಒಳಗೆಯೇ ಹಾಕಿ ಮನೆ ಸೀಜ್​ ಮಾಡಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ತಡರಾತ್ರಿ ಪೊಲೀಸರ ನೆರವಿಂದ ಮಗನನ್ನು ಹೊರತರಲಾಗಿದೆ.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಆಪರೇಷನ್, ಬಿಜೆಪಿ ಶಾಸಕರಿಗೆ ಕಾಂಗ್ರೆಸ್​ ಗಾಳ? ಲಿಸ್ಟ್​ನಲ್ಲಿ ಯಾರ್ಯಾರು?

ಇನ್ನು ಈ ಬಗ್ಗೆ ಬಾಡಿಗೆದಾರನ ಸಂಬಂಧಿ ಪ್ರಸನ್ನ ಎಂಬುವವರು ಮಾತನಾಡಿದ್ದು, ಮೂರು ತಿಂಗಳ ಹಿಂದೆ ಮಾಲೀಕ ಪುಟ್ಟಪ್ಪಗೆ 10 ಲಕ್ಷ ಹಣ ನೀಡಿ ನಮ್ಮ ತಂಗಿ ಮನೆ ಭೋಗ್ಯಕ್ಕೆ ಪಡೆದಿದ್ದರು. ಯಾವುದೇ ಮಾಹಿತಿ ನೀಡದೇ ವೀರಶೈವ ಕೋ ಆಪರೇಟಿವ್ ಬ್ಯಾಂಕ್​ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ರಾತ್ರಿ ಮನೆಯಲ್ಲಿ ಮಗ ಮಲಗಿದ್ದ, ಇದನ್ನು ಗಮನಿಸದೆ ಮನೆ ಜಪ್ತಿ ಮಾಡಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಮಗನನ್ನು ಹೊರ ಕರೆತರಲಾಗಿದೆ ಎಂದು ಕೆಂಗೇರಿ ಉಪನಗರದಲ್ಲಿ ಬಾಡಿಗೆದಾರನ ಸಂಬಂಧಿ ಪ್ರಸನ್ನ ಬ್ಯಾಂಕ್ ಸಿಬ್ಬಂದಿ ಎಡವಟ್ಟಿಗೆ ಆಕ್ರೋಶ ಹೊರ ಹಾಕಿದರು.

ಬಾಡಿಗೆದಾರನ ಪರ ವಕೀಲರಿಂದ ಗಂಭೀರ ಆರೋಪ

ಬಾಡಿಗೆದಾರನ ಪರ ವಕೀಲ ಹೇಮಂತ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಹಲ್ಲೆ, ನಿಂದನೆ ಆರೋಪ ಮಾಡಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನ ಹೊರ ಹಾಕಿದ್ದರು. ಕೋರ್ಟ್ ಕಮಿಷನರ್ ದೈಹಿಕ ಹಲ್ಲೆ ನಡೆಸಿದ್ದಾರೆ. ನಮ್ಮ ಸಹೋದ್ಯೋಗಿನ ನಿಂದಿಸಿದ್ದಾರೆ, ನನಗೂ ಹೊಡೆದಿದ್ದಾರೆ. 2021 ಕೋರ್ಟ್ ಆರ್ಡರ್ ಇದೆ. ವಜಾ ಆಗಿರುವ ಆಗಿರುವ ಕೋರ್ಟ್ ಆರ್ಡರ್ ತೆಗೆದುಕೊಂಡು ಬಂದಿದ್ದಾರೆ. ಸಂಜೆ 7 ಘಂಟೆಗೆ ಮನೆಗಳ ಡೋರ್ ಲಾಕ್ ಮಾಡಿದ್ದಾರೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ವಕೀಲ ಹೇಮಂತ್ ಆರೋಪಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:24 am, Thu, 17 August 23

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್