ಬೆಂಗಳೂರು: ಹೆಲ್ಮೆಟ್ ಕಳ್ಳತನ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು

ಹೆಲ್ಮೆಟ್ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಯುವಕನೊಬ್ಬ ಜ್ಯೂಸ್ ಕುಡಿಯಲು ಬೇಕರಿಗೆ ತೆರಳಿದ್ದ ವೇಳೆ ಅಲ್ಲಿಯೇ ಹೆಲ್ಮೆಟ್ ಮರೆತು ಬಂದಿದ್ದಾನೆ. ಬಳಿಕ ಹೋಗಿ ನೋಡುವಷ್ಟರಲ್ಲಿ ದುಷ್ಕರ್ಮಿಗಳು ಹೆಲ್ಮೆಟ್ ಕದ್ದು ಪರಾರಿಯಾಗಿದ್ದಾರೆ.

ಬೆಂಗಳೂರು: ಹೆಲ್ಮೆಟ್ ಕಳ್ಳತನ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು
ಪ್ರಾತಿನಿಧಿಕ ಚಿತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 17, 2023 | 7:07 AM

ಬೆಂಗಳೂರು, ಆ.17: ಮಹಾನಗರದಲ್ಲಿ ಕಳ್ಳತನ ಮೀತಿಮೀರಿದ್ದು, ಇದೀಗ ಹೆಲ್ಮೆಟ್ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಬೆಂಗಳೂರಿನ (Bengaluru) ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಹೌದು, ಬೈಕ್​ ಸವಾರ ಸೂರ್ಯ ಎಂಬುವವರು ದೂರು ನೀಡಿದವರು. ಇವರು ದ್ವಾರಕಾನಗರದ ಜಯದುರ್ಗ ಬೇಕರಿಗೆ ತೆರಳಿದ್ದರು. ಈ ವೇಳೆ ಬೇಕರಿಯ ಟೇಬಲ್ ಮೇಲೆ 10 ಸಾವಿರ ಮೌಲ್ಯದ ಹೆಲ್ಮೆಟ್ ಇಟ್ಟಿದ್ದಾರೆ. ಬಳಿಕ ಜ್ಯೂಸ್ ಕುಡಿದು ಹೆಲ್ಮೆಟ್ ಮರೆತು ಸ್ವಲ್ಪ ದೂರ ಹೋದ ಮೇಲೆ ಮರೆತಿರುವುದು ಅರಿವಿಗೆ ಬಂದಿದೆ. ವಾಪಸ್​ ಬೇಕರಿಗೆ ಬಂದು ನೋಡುವಷ್ಟರಲ್ಲಿ ಹೆಲ್ಮೆಟ್​ ಕಳುವಾಗಿದೆ ಎಂದು ದೂರು ನೀಡಿದ್ದಾರೆ.

ಸಿಸಿಕ್ಯಾಮರಾ ದೃಶ್ಯ ಆಧರಿಸಿ ಹೆಲ್ಮೆಟ್​ ಪತ್ತೆಗೆ ಶೋಧ

ಇನ್ನು ಬೈಕ್​ ಸವಾರ ಸೂರ್ಯ ಎಂಬುವವರು ನೀಡಿದ ದೂರಿನನ್ವಯ ಗಿರಿನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಕುರಿತು ಬೇಕರಿಯಲ್ಲಿನ ಸಿಸಿಕ್ಯಾಮರಾ ದೃಶ್ಯ ಆಧರಿಸಿ ಹೆಲ್ಮೆಟ್​ ಪತ್ತೆಗೆ ಈಗಾಗಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ:Mysore police: ಐಶಾರಾಮಿ ಕಾರು, ಶ್ರೀಮಂತರ ಮನೆಯೇ ಇವನ ಟಾರ್ಗೆಟ್: 56 ಕಳ್ಳತನ ಮಾಡಿದ್ದರೂ ಪೊಲೀಸರಿಗೆ ಮಾತ್ರ ಸಿಕ್ಕಿರಲಿಲ್ಲ- ಕೊನೆಗೂ ಅಂದರ್​

ಸಕ್ಕರೆ ಸಮೇತ ಲಾರಿ ಮಾರಾಟ ಮಾಡುತ್ತಿದ್ದ ಚಾಲಕನ ಬಂಧನ

ಬಾಗಲಕೋಟೆ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಾಳದ ವಿಜಯ್ ದಳವಾಯಿ ಎಂಬಾತ ಸಕ್ಕರೆ ಲೋಡ್ ಸಮೇತ ಲಾರಿ ಮಾರಾಟ ಮಾಡುತ್ತಿದ್ದ ವೇಳೆ ಆತನನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ 10.83 ಲಕ್ಷ ಮೌಲ್ಯದ 600 ಚೀಲ ಸಕ್ಕರೆ ಜೊತೆಗೆ 10 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದೆ. ಇನ್ನು ಈ ಲಾರಿ ಟ್ರಾನ್ಸ್​​ಪೋರ್ಟ್​​ ಉದ್ಯಮಿ ಸಂತೋಷ್ ನೀರಕೇರಿ ಎನ್ನುವವರಿಗೆ ಸೇರಿದೆ. ಈ ಲಾರಿ ನಿರಾಣಿ ಕಾರ್ಖಾನೆಯಿಂದ ಲೋಡ್​ ಮಾಡಿಕೊಂಡು ಹೋಗಿದ್ದು, ಚಿಕ್ಕಬಳ್ಳಾಪುರದ ವಿಲ್​ಕಾರ್ಟ್ ಕಂಪನಿಗೆ ಅನ್​ಲೋಡ್ ಮಾಡಬೇಕಿತ್ತು. ಆದರೆ, ಜೂ.14ರಂದು ಲಾರಿ ಸಮೇತ ಚಾಲಕ ನಾಪತ್ತೆಯಾಗಿದ್ದ. ಈ ಬಗ್ಗೆ ಮುಧೋಳ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 am, Thu, 17 August 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ