ಶಕ್ತಿ ಯೋಜನೆ ಇನ್ನೂ 10 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ, ಮಹಿಳೆಯರು ಆತಂಕಪಡುವ, ಗಾಬರಿಯಾಗುವ ಅವಶ್ಯಕತೆಯಿಲ್ಲ: ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಪಾಪ, ಮಹಿಳೆಯರು ಬಸ್ ಸ್ಟಾಪ್ಗಳಲ್ಲಿರುವ ಟ್ರಾಫಿಕ್ ಕಂಟ್ರೋಲರ್ ಗಳ ಜೊತೆ ಗಾಬರಿಯಿಂದ ವಿಚಾರಿಸುತ್ತಿದ್ದಾರಂತೆ. ಹಾಗಾಗಿ ಯಾರೂ, ಅದರಲ್ಲೂ ವಿಶೆಷವಾಗಿ ಮಹಿಳೆಯರು ಮತ್ತು ಶಾಲಾ ಮಕ್ಕಳು ಈ ಸುದ್ದಿಯನ್ನು ನಂಬಬೇಕಿಲ್ಲ ಎಂದು ಸಚಿವರು ಹೇಳಿದರು,
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಜಾರಿಗೊಳಿಸಿರುವ ಶಕ್ತಿ ಯೋಜನೆ (Shakti Scheme) ಯಾವ ಕಾರಣಕ್ಕೂ ನಿಂತುಹೋಗೋದಿಲ್ಲ, ಇನ್ನು ಹತ್ತು ವರ್ಷಗಳ ಕಾಲ ನಿರಂತರವಾಗಿ ಜಾರಿಯಲ್ಲಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು. ನಗರದಲ್ಲಿಂದು ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬೆಂಗಳೂರಿನ ಕಾಂಗ್ರೆಸ್ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ರಾಮಲಿಂಗಾರೆಡ್ಡಿ, ಒಂದು ನಿರ್ದಿಷ್ಟ ಪಕ್ಷ ಸುಖಾಸುಮ್ಮನೆ ಸಾಮಾಜಿಕ ಜಾಲತಾಣಗಳ ಮೂಲಕ ಶಕ್ತಿ ಯೋಜನೆ ನಿಂತು ಹೋಗುತ್ತದೆ ಅಂತ ಅಪಪ್ರಚಾರ ಮಾಡುತ್ತಿದೆ. ಪಾಪ, ಮಹಿಳೆಯರು ಬಸ್ ಸ್ಟಾಪ್ ಗಳಲ್ಲಿರುವ ಟ್ರಾಫಿಕ್ ಕಂಟ್ರೋಲರ್ ಗಳ ಜೊತೆ ಗಾಬರಿಯಿಂದ ವಿಚಾರಿಸುತ್ತಿದ್ದಾರಂತೆ. ಹಾಗಾಗಿ ಯಾರೂ, ಅದರಲ್ಲೂ ವಿಶೆಷವಾಗಿ ಮಹಿಳೆಯರು ಮತ್ತು ಶಾಲಾ ಮಕ್ಕಳು ಈ ಸುದ್ದಿಯನ್ನು ನಂಬಬೇಕಿಲ್ಲ ಮತ್ತು ಮಹಿಳೆಯರು ಪಾಸ್ ಮಾಡಿಸುವ ಅವಶ್ಯಕತೆಯೂ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ