ತಾಯಿ ಕಳೆದುಕೊಂಡ ವಿಜಯ್ ರಾಘವೇಂದ್ರ ಪುತ್ರ ಶೌರ್ಯನ ಜತೆ ನಿಂತು ಕಾಳಜಿ ತೋರಿದ ಶ್ರೀಮುರಳಿ ಪತ್ನಿ ವಿದ್ಯಾ
ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರ ಕ್ರಿಯೆ ಇಂದು (ಆಗಸ್ಟ್ 16) ನಡೆದಿವೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಶ್ರೀಮುರಳಿ ಪತ್ನಿ ವಿದ್ಯಾ ಅವರು ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ಹೃದಯಾಘಾತದಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿ. ಸ್ಪಂದನಾ ಅವರ ಅಗಲಿಕೆ ಬಳಿಕ ವಿಜಯ್ ರಾಘವೇಂದ್ರ (Vijay Raghavendra) ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಮಗ ಶೌರ್ಯ ಕೂಡ ಕಣ್ಣೀರು ಹಾಕುತ್ತಿದ್ದಾನೆ. ಇಂದು (ಆಗಸ್ಟ್ 16) ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆದಿವೆ. ಈ ವೇಳೆ ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ (Vidya Srimurali). ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಬಳಿಕ ಮಲ್ಲೇಶ್ವರದ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos