Video: ಅರಳು ಹುರಿದಂತೆ 9 ಭಾಷೆಯಲ್ಲಿ ಮಾತನಾಡುವ ಸರ್ಕಾರಿ ಶಾಲೆ ವಿದ್ಯಾರ್ಥಿನಿ: ಪುಟ್ಟ ಬಾಲಕಿಯ ಭಾಷಾ ಪ್ರಾವೀಣ್ಯತೆಗೆ ಎಲ್ಲರ ಮೆಚ್ಚುಗೆ

Video: ಅರಳು ಹುರಿದಂತೆ 9 ಭಾಷೆಯಲ್ಲಿ ಮಾತನಾಡುವ ಸರ್ಕಾರಿ ಶಾಲೆ ವಿದ್ಯಾರ್ಥಿನಿ: ಪುಟ್ಟ ಬಾಲಕಿಯ ಭಾಷಾ ಪ್ರಾವೀಣ್ಯತೆಗೆ ಎಲ್ಲರ ಮೆಚ್ಚುಗೆ

ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 16, 2023 | 8:00 PM

Bagalkote News: ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಗುರುಲಿಂಗಪ್ಪ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಮಾತೃಭಾಷೆ ಜತೆಗೆ ವಿವಿಧ ಭಾಷೆಗಳನ್ನು ಮಾತನಾಡುತ್ತಾಳೆ. ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಮಲೆಯಾಳಿ, ಉರ್ದು,ಲಂಬಾಣಿ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾಳೆ.

ಬಾಗಲಕೋಟೆ, ಆಗಸ್ಟ್ 16: ಒಂದೇ ಭಾಷೆ (languages) ಮಾತನಾಡಲು ಪರದಾಡುವ ಇಂದಿನ ದಿನಗಳಲ್ಲಿ ಪುಟ್ಟ ಬಾಲಕಿಯೊಬ್ಬಳು ದೇಶದ ಬೇರೆ ಬೇರೆ ರಾಜ್ಯದ ಭಾಷೆಗಳಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾಳೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಗುರುಲಿಂಗಪ್ಪ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಮಾತೃಭಾಷೆ ಜತೆಗೆ ವಿವಿಧ ಭಾಷೆಗಳನ್ನು ಮಾತನಾಡುತ್ತಾಳೆ. ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಮಲೆಯಾಳಿ, ಉರ್ದು, ಲಂಬಾಣಿ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ನಲಿ ಕಲಿ ವಿಭಾಗದಲ್ಲಿ ಶಿಕ್ಷಕ ಸಂಗಮೇಶ ಬಂಡರಗಲ್ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಾಲನ್ನು ಬಾಲಕಿಯಿಂದ ವಿವಿಧ ಭಾಷೆಗಳಲ್ಲಿ ಕೇಳಿ ಅದನ್ನು ಫೇಸ್‌ಬುಕ್‌ದಲ್ಲಿ ಹರಿಬಿಟ್ಟಿದ್ದು ಸೋಷಿಯಲ್ ಮಿಡಿಯಾದಲ್ಲಿ ಪುಟ್ಟ ಬಾಲಕಿಯ ಭಾಷಾ ಪ್ರಾವೀಣ್ಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Aug 16, 2023 07:47 PM