Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಮನ ಗೆದ್ದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತಾ?

ಮಹಿಳೆಯರ ಮನ ಗೆದ್ದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತಾ?

ಸಾಧು ಶ್ರೀನಾಥ್​
|

Updated on:Aug 16, 2023 | 8:39 PM

ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಅನ್ನೋ ಸುದ್ದಿ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಕೆಲ ಮಹಿಳೆಯರು ಬಸ್ ಪಾಸ್ ತೆಗೆದುಕೊಳ್ಳೋಕೂ ಮುಂದಾಗಿದ್ದಾರೆ. ಆದ್ರೆ, ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಅನ್ನೋದು ಕೇವಲ ಊಹಾಪೋಹ ಅಂತಾ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಒಂದು ಪಕ್ಷದವರು ಈ ರೀತಿ ವದಂತೆ ಹಬ್ಬಿಸುತ್ತಿದ್ದಾರೆ ಎಂದು ಸಾರಿಗೆ ಸಚಿವರು ಕಿಡಿಕಾರಿದ್ದಾರೆ.

ಕರ್ನಾಟಕದ ಮಹಿಳೆಯರ ಮನ ಗೆದ್ದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು (Shakti Scheme) ನಿಲ್ಲಿಸಲಾಗುತ್ತೆ.. ಈ ಯೋಜನೆಗೆ ಹೈಕೋರ್ಟ್ (High court) ತಡೆ ನೀಡಿದೆ ಅನ್ನೋ ವದಂತಿ ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಆದ್ರೆ, ಶಕ್ತಿ ಯೋಜನೆ ಕುರಿತ ವದಂತಿಗೆ (Social Media Gossip) ಸರ್ಕಾರ ತೆರೆ ಎಳೆದಿದೆ. ಈ ವದಂತಿಯ ಹಿಂದೆ ಆ ಒಂದು ಪಕ್ಷ ಇದೆ ಅಂತಾ ಸಾರಿಗೆ ಸಚಿವರು ಕಿಡಿಕಾರಿದ್ದಾರೆ. ಹಾಗಾದ್ರೆ ಏನಿದು ಶಕ್ತಿ ಯೋಜನೆ ವದಂತಿ ಹಾರಾಟ ಅನ್ನೋದನ್ನ ತೋರಿಸ್ತೀವಿ ನೋಡಿ. ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಅನ್ನೋ ಆತಂಕ – ಒಂದು ಪಕ್ಷದವರಿಂದ ಇಂತಹ ವದಂತಿ ಎಂದ ರಾಮಲಿಂಗಾರೆಡ್ಡಿ(Transport minister Ramalinga Reddy) – ಇನ್ನೂ 10 ವರ್ಷ ಶಕ್ತಿ ಯೋಜನೆ ಇರುತ್ತೆ ಎಂದ ಸಾರಿಗೆ ಸಚಿವ

ತೀರ್ಥ ಕ್ಷೇತ್ರಗಳಲ್ಲೂ ಮಹಿಳೆಯರ ದಂಡು.. ಪ್ರವಾಸಿ ತಾಣಗಳಲ್ಲೂ ಮಹಿಳೆಯರ ಹಿಂಡು. ಸರ್ಕಾರಿ ಬಸ್‌ಗಳಂತೂ ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ರಾಜ್ಯದ ಮಹಿಳೆಯರು ಒಂದೇ ಒಂದು ರೂಪಾಯಿ ನೀಡದೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದೆಲ್ಲವೂ ಶಕ್ತಿಯೋ ಯೋಜನೆ ಫಲ. ಆದ್ರೆ, ಇಂತಹ ಶಕ್ತಿ ಯೋಜನೆಯೇ ರದ್ದಾಗಿದೆಯಂತೆ.. ಹೈಕೋರ್ಟ್ ಶಕ್ತಿಯೋಜನೆಗೆ ತಡೆ ನೀಡಿದೆಯಂತೆ.. ಇನ್ನೇಲೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ವಂತೆ.. ಹೀಗೆ ಕೆಲ ದಿನಗಳಿಂದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಅಂತೆಕಂತೆಗಳದ್ದೇ ಸದ್ದು.

ಶಕ್ತಿ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ ಅನ್ನೋ ಒಂದು ಸ್ಕ್ರೀನ್ ಶಾಟ್ ಕಾಡ್ಗಿಚ್ಚಿನಂತೆ ಹರಿದಾಡಿದೆ. ಆದ್ರೆ, ಶಕ್ತಿ ಯೋಜನೆ ರದ್ದು ಅನ್ನೋದು ಶುದ್ಧ ಸುಳ್ಳು.. ಇದೊಂದು ನಕಲಿ ಸುದ್ದಿ. ಬುಧವಾರ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.

ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಅನ್ನೋ ಸುದ್ದಿ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಕೆಲ ಮಹಿಳೆಯರು ಬಸ್ ಪಾಸ್ ತೆಗೆದುಕೊಳ್ಳೋಕೂ ಮುಂದಾಗಿದ್ದಾರೆ. ಆದ್ರೆ, ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಅನ್ನೋದು ಕೇವಲ ಊಹಾಪೋಹ ಅಂತಾ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಒಂದು ಪಕ್ಷದವರು ಈ ರೀತಿ ವದಂತೆ ಹಬ್ಬಿಸುತ್ತಿದ್ದಾರೆ ಎಂದು ಸಾರಿಗೆ ಸಚಿವರು ಕಿಡಿಕಾರಿದ್ದಾರೆ.

ಇನ್ನು ಯೋಜನೆ ನಿಲ್ಲಿಸಲಾಗುತ್ತೆ ಅನ್ನೋ ವದಂತಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಕೂಡ ಸ್ಪಷ್ಟನೆ ನೀಡಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರೋ ಕೆಎಸ್​ಆರ್​ಟಿಸಿ, ಶಕ್ತಿ ಯೋಜನೆ ಸ್ಥಗಿತಗೊಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ಮಹಿಳೆಯರ ಉಚಿತ‌ ಪ್ರಯಾಣದ ಶಕ್ತಿ ಯೋಜನೆ ಮುಂದುವರಿಯುತ್ತೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

ಸಾರಿಗೆ ಸಚಿವರು ಮತ್ತು ಕೆಎಸ್‌ಆರ್‌ಟಿಸಿಯ ಸ್ಪಷ್ಟನೆಯಿಂದ ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ. ಇನ್ನುಂದೆ ಯಾವುದೇ ಊಹಾಪೋಹ ವದಂತಿಗಳಿಗೆ ಕಿವಿಗೊಡದೆ ಮಹಿಳೆಯರು ನಿಶ್ಚಿಂತೆಯಿಂದ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 16, 2023 08:37 PM