ಚಿಕ್ಕಮ್ಮ ವಿದ್ಯಾರ ಪ್ರೀತಿ-ಕಾಳಜಿ-ವಾತ್ಸಲ್ಯ ಶೌರ್ಯನಿಗೆ ಅಮ್ಮನನ್ನು ಮಿಸ್ ಮಾಡಿಕೊಳ್ಳಲು ಬಿಡಲಾರವು!
ತಾಯಿಯನ್ನು ಕಳೆದುಕೊಂಡ ಶೌರ್ಯನಿಗೆ ಅಮ್ಮನಂತೂ ಇನ್ನು ಸಿಗಲಾರಳು. ಆದರೆ, ಅವನ ಚಿಕ್ಕಮ್ಮ ವಿದ್ಯಾರವರ (ಶ್ರೀಮುರಳಿ ಪತ್ನಿ) ಪ್ರೀತಿ-ವಾತ್ಸಲ್ಯ, ಅಕ್ಕರೆ-ಕಾಳಜಿಯಲ್ಲಿ ಅವನು ದುಃಖವನ್ನು ಬೇಗ ಮರೆಯುವುದು ನಿಶ್ಚಿತ ಅನಿಸುತ್ತದೆ.
ಬೆಂಗಳೂರು: ಎಸ್ ಎ ಚಿನ್ನೇಗೌಡರ (SA Chinne Gowda) ಕುಟುಂಬದ ಇದೇ ಅಂಶವನ್ನು ನಾವು ಪದೇಪದೆ ಹೇಳುತ್ತಿರೋದು. ಅವರ ಕುಟುಂಬ ಒಂದು ಕ್ಲೋಸ್-ನಿಟ್-ಯುನಿಟ್ ನಂತಿದೆ. ಕುಟುಂಬದ ಸದಸ್ಯರ ನಡುವೆ ಇರುವ ಪ್ರೀತಿ, ಕೇರ್, ವಾತ್ಸಲ್ಯ ಅನನ್ಯವಾದದ್ದು. ತಾಯಿಯನ್ನು ಕಳೆದುಕೊಂಡ ಶೌರ್ಯನಿಗೆ (Shourya) ಅಮ್ಮನಂತೂ ಇನ್ನು ಸಿಗಲಾರಳು. ಆದರೆ, ಅವನ ಚಿಕ್ಕಮ್ಮ ವಿದ್ಯಾರವರ (Vidya Murali) (ಶ್ರೀಮುರಳಿ ಪತ್ನಿ) ಪ್ರೀತಿ-ವಾತ್ಸಲ್ಯ, ಅಕ್ಕರೆ-ಕಾಳಜಿಯಲ್ಲಿ ಅವನು ದುಃಖವನ್ನು ಬೇಗ ಮರೆಯುವುದು ನಿಶ್ಚಿತ ಅನಿಸುತ್ತದೆ. ಬಿಕೆ ಶಿವರಾಂ ಮನೆಯಲ್ಲಿ ಸ್ಪಂದನಾರ 11ನೇ ದಿನದ ಕಾರ್ಯ ಮುಗಿದ ಬಳಿಕ ಶೌರ್ಯನನ್ನು ವಿದ್ಯಾ ತಮ್ಮೊಂದಿಗೆ ಮನೆಗೆ ಕರೆದೊಯ್ಯುತ್ತಿದ್ದಾರೆ. ಅವನ ಕೈ ಹಿಡಿದು ಅವರು ಕರೆದೊಯ್ಯುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ. ಶೌರ್ಯ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾನೆ. ಅವನ ಮುಖದಲ್ಲಿ ಆ ಮುಗ್ಧ ನಗುವನ್ನು ನೋಡಬಹುದು. ತನ್ನ ಹಿಂದೆ ಟಿವಿ9 ಕನ್ನಡ ವಾಹಿನಿಯ ಕೆಮೆರಾಮನ್ ಇರೋದು ಅವನಿಗೆ ಗೊತ್ತಿದೆ ಮತ್ತು ಅದರ ಫ್ರೇಮಲ್ಲಿ ಬಾರದಿರಲು ಅವನು ಪ್ರಯತ್ನಿಸುತ್ತಿದ್ದಾನೆ. ಚಿಕ್ಕಮ್ಮನಿಗೂ ಕೆಮೆರಾ ವಿಷಯ ತಿಳಿಸುತ್ತಾನೆ. ಪ್ರಾಯಶಃ ಶೌರ್ಯ ಊಟ ಮಾಡುವಾಗ ಸಿಹಿ ತಿಂದಿರಲಿಕ್ಕಿಲ್ಲ, ವಿದ್ಯಾ ತಮ್ಮ ಕೈಯಾರೆ ಲಡ್ಡುವೊಂದನ್ನು ಅವನಿಗೆ ಬಲವಂತದಿಂದ ತಿನ್ನಿಸುತ್ತಾರೆ. ವಿಡಿಯೋ ನೋಡುತ್ತಿದ್ದರೆ ಶೌರ್ಯ ತನ್ನಮ್ಮನನ್ನು ಮಿಸ್ ಮಾಡಿಕೊಳ್ಳಲಾರ ಅನಿಸುತ್ತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

