ಭಾರದ ಹೃದಯ ಹೊತ್ತ ಎಸ್ ಎ ಚಿನ್ನೇಗೌಡ ಸೊಸೆ ಸ್ಪಂದನಾರ ಉತ್ತರ ಕ್ರಿಯೆಯಲ್ಲಿ ಲವಲವಿಕೆಯಿಂದ ಓಡಾಡಿದರು
ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜನರನ್ನು ಸ್ಪಂದನ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಬರಮಾಡಿಕೊಳ್ಳುತ್ತಿದ್ದರೆ, ಬೀಗರ ಮನೆಯಲ್ಲಿದ್ದರೂ ಚಿನ್ನೇಗೌಡರು ಊಟೋಪಚಾರ ನೋಡಿಕೊಳ್ಳುತ್ತಿದ್ದರು. ಹೃದಯದಲ್ಲಿ ದುಃಖ ಮಡುಗಟ್ಟಿದ್ದರೂ ಇಳಿ ವಯಸ್ಸಿನ ಚಿನ್ನೇಗೌಡರು ಲವಲವಿಕೆಯಿಂದ ಓಡಾಡುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದು.
ಬೆಂಗಳೂರು: ವಿಜಯರಾಘವೇಂದ್ರ ತಂದೆ ಮತ್ತು ಆಗಸ್ಟ್ 6 ರಂದು ಅಕಾಲಿಕ ಮರಣಕ್ಕೀಡಾದ ಸ್ಪಂದನಾ ವಿಜಯ್ ಅವರ ಮಾವ ಎಸ್ ಎ ಚಿನ್ನೇಗೌಡ (SA Chinne Gowda) ಅತ್ಯಂತ ಸಭ್ಯ ಸದ್ಗೃಹಸ್ಥ ಅಂತ ಚಿತ್ರರಂಗವಲ್ಲದೆ ಬೇರೆ ಕ್ಷೇತ್ರದ ಕನ್ನಡಿಗರಿಗೂ ಗೊತ್ತು. ಮಗಳಂಥ ಸೊಸೆಯನ್ನು ಕಳೆದುಕೊಂಡು ಅವರ ಅಪಾರ ದುಃಖದಲ್ಲಿದ್ದಾರೆ. ಆದರೆ, ಬದುಕು ಯಾರಿಗೆ ಆಗಲಿ ನಿಂತ ನೀರಲ್ಲ, ಅದು ಸಾಗುತ್ತಿರಬೇಕು. ಸ್ಪಂದನಾರ ತಂದೆ ಬಿಕೆ ಶಿವರಾಂ (BK Shivaram) ಮನೆಯಲ್ಲಿ ಇಂದು ಆಯೋಜಿಸಲಾಗಿದ್ದ 11ನೇ ದಿನದ ಉತ್ತರ ಕ್ರಿಯೆಯಲ್ಲಿ (11th day ritual) ಚಿನ್ನೇಗೌಡ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದರು. ಮನೆ ಮುಂದೆ ಕೂತು ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜನರನ್ನು ಸ್ಪಂದನ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಬರಮಾಡಿಕೊಳ್ಳುತ್ತಿದ್ದರೆ, ಬೀಗರ ಮನೆಯಲ್ಲಿದ್ದರೂ ಚಿನ್ನೇಗೌಡರು ಊಟೋಪಚಾರ ನೋಡಿಕೊಳ್ಳುತ್ತಿದ್ದರು. ಹೃದಯದಲ್ಲಿ ದುಃಖ ಮಡುಗಟ್ಟಿದ್ದರೂ ಇಳಿ ವಯಸ್ಸಿನ ಚಿನ್ನೇಗೌಡರು ಲವಲವಿಕೆಯಿಂದ ಓಡಾಡುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ