ನಟನೆ ಕಲಿಯುವುದು ಸೇರಿ ಶೌರ್ಯನ ಬಗ್ಗೆ ಸ್ಪಂದನ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು: ಟಿ ಎಸ್ ನಾಗಾಭರಣ

ನಟನೆ ಕಲಿಯುವುದು ಸೇರಿ ಶೌರ್ಯನ ಬಗ್ಗೆ ಸ್ಪಂದನ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು: ಟಿ ಎಸ್ ನಾಗಾಭರಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 10, 2023 | 7:40 PM

ಶೌರ್ಯ ಮುಗ್ಧ ಪುಟ್ಟ ಹುಡುಗ, ತಾಯಿಯ ಸಾವು, ಅವರ ಅಗಲುವಿಕೆ, ಅಮ್ಮನಿಲ್ಲದ ಭವಿಷ್ಯದ ಬದುಕು ಅವನಿಗೆ ಅರ್ಥವಾಗಿರಲಾರದು. ಮುಂದೊಂದು ದಿನ ಅವನಿಗದು ಅರ್ಥವಾಗಲಿದೆ, ಆಗ ಅವನ ವ್ಯಕ್ತಿತ್ವ ಗಟ್ಟಿಯಾಗಿ ರೂಪುಗೊಳ್ಳುತ್ತದೆ ಎಂದು ನಾಗಾಭರಣ ಹೇಳಿದರು.

ಬೆಂಗಳೂರು: ಸೋಮವಾರ ಬೆಳಗ್ಗೆ ಹಠಾತ್ ಸಾವಿಗೀಡಾದ ಸ್ಪಂದನ ವಿಜಯರಾಘವೇಂದ್ರ (Spandana Vijay Raghavendra) ತನ್ನ ಮಗ ಶೌರ್ಯನ ಬಗ್ಗೆ ಹಲವಾರು ಕನಸುಗಳನ್ನಿಟ್ಟುಕೊಂಡಿದ್ದರು, ನಟನೆ ಕಲಿಯುವುದು ಅವುಗಳಲ್ಲಿ ಒಂದು ಎಂದು ಶೌರ್ಯನಿಗೆ ಅಭಿನಯದ ತರಬೇತಿ ನೀಡುತ್ತಿರುವ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ (TS Nagabharana) ಹೇಳುತ್ತಾರೆ. ತಮ್ಮ ಕಚೇರಿಯಲ್ಲಿ ಇಂದು ಟಿವಿ9 ಕನ್ನಡ ವಾಹಿನಿ ವರದಿಗಾರ್ತಿ ಮಂಗಳಾ ಜೊತೆ ಮಾತಾಡಿದ ನಾಗಾಭರಣ, ಶೌರ್ಯ ಮುಗ್ಧ ಪುಟ್ಟ ಹುಡುಗ (innocent little boy), ತಾಯಿಯ ಸಾವು, ಅವರ ಅಗಲುವಿಕೆ, ಅಮ್ಮನಿಲ್ಲದ ಭವಿಷ್ಯದ ಬದುಕು ಅವನಿಗೆ ಅರ್ಥವಾಗಿರಲಾರದು. ಮುಂದೊಂದು ದಿನ ಅವನಿಗದು ಅರ್ಥವಾಗಲಿದೆ, ಆಗ ಅವನ ವ್ಯಕ್ತಿತ್ವ ಗಟ್ಟಿಯಾಗಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು. ಅವನು ಬೆಳೆದು ನಟನಾಗುತ್ತಾನೆ ಅಂತೇನಿಲ್ಲ, ಡಾಕ್ಟರ್ ಆಗಬಹುದು, ಅಥಬಾ ಬೇರೆ ಯಾವುದಾದರೂ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ನಾಗಾಭರಣ ಹೇಳಿದರು. ವಾಸ್ತವ ಸಂಗತಿಯೆಂದರೆ, ಇನ್ನು ಮೇಲೆ ಶೌರ್ಯನಿಗೆ ವಿಜ್ಜಿಯೇ (ವಿಜಯರಾಘವೇಂದ್ರ) ಅಪ್ಪ-ಅಮ್ಮ ಎರಡೂ ಆಗಬೇಕು. ಅವನೇ ದಿನಾಲೂ ಬಂದ ಮಗನನ್ನು ಬಿಟ್ಟು ಹೋಗುತ್ತಾನೆ ಮತ್ತು ಕರೆದುಕೊಂಡು ಹೋಗುತ್ತಾನೆ, ತಾಯಿಯಿಲ್ಲದ ಕೊರತೆ ವಿಜ್ಜಿ ನೀಗಿಸುತ್ತಾನೆ ಎಂಬ ನಂಬಿಕೆ ನನಗಿದೆ ಎಂದು ನಾಗಾಭರಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ