Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳತನದ ಆರೋಪ, ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ

ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿದ್ದಷ್ಟೇ ಅಲ್ಲದೆ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ.

ಕಳ್ಳತನದ ಆರೋಪ, ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ
ಮೂತ್ರImage Credit source: NDTV
Follow us
ನಯನಾ ರಾಜೀವ್
|

Updated on: Aug 06, 2023 | 1:23 PM

ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿದ್ದಷ್ಟೇ ಅಲ್ಲದೆ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ದುಮರಿಯಾಗಂಜ್ ತಹಸಿಲ್ ಪ್ರದೇಶದ ಕೊಂಕಟಿ ಕ್ರಾಸ್‌ರೋಡ್‌ನಲ್ಲಿ ಹಣ ಮತ್ತು ಕೋಳಿ ಕದಿಯುತ್ತಿದ್ದ ಆರೋಪದ ಮೇಲೆ ಕೋಳಿ ಫಾರಂ ನಿರ್ವಾಹಕರು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಮಾನವೀಯತೆ ಮರೆತು ನಡೆದುಕೊಂಡಿದ್ದಾರೆ.

ಮಕ್ಕಳನ್ನು ಕಟ್ಟಿ ಹಾಕಿ ಮೊದಲು ಥಳಿಸಿ ನಂತರ ಮೂತ್ರ ಕುಡಿಸಿ ಅವರ ಗುಪ್ತಾಂಗಕ್ಕೆ ಮೆಣಸಿನಕಾಯಿ ಹಾಕಿ ಪೆಟ್ರೋಲ್  ಇಂಜೆಕ್ಷನ್ ಕೊಟ್ಟಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು ಎನ್ನಲಾಗುತ್ತಿದ್ದು, ಶನಿವಾರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಘಟನೆಯಲ್ಲಿ ಭಾಗಿಯಾದ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಎಎಸ್ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾದರು.

ಸೌದ್ ಎಂಬುವವರ ಮಗ ಅಜಮ್ ಎಂಬಾತ ಕೋಳಿ ಫಾರಂ ಆತನ ಸ್ನೇಹಿತನೊಂದಿಗೆ ಸೇರಿ ನೋಡಿಕೊಳ್ಳುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಹಣ ಹಾಗೂ ಕೋಳಿ ಕದ್ದ ಆರೋಪದ ಮೇಲೆ ಇಬ್ಬರು ಬಾಲಕನನ್ನು ಥಳಿಸಿದ್ದಾರೆ. ಕಟ್ಟಿ ಹಾಕಿ ಗೋಮೂತ್ರ ಕುಡಿಸಿ ಕೊನೆಗೆ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ್ದಾರೆ.

ಮತ್ತಷ್ಟು ಓದಿ: ಮಚ್ಚು ಹಿಡಿದು ಮೆರೆದವನು ಮಚ್ಚಿನಿಂದಲೇ ಅಂತ್ಯ, ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ ಹತ್ಯೆಯಾದ ರೌಡಿಶೀಟರ್

ಕೋಳಿ ಫಾರಂ ನಿರ್ವಾಹಕರು ಕಳೆದ ಮೂರು ವರ್ಷಗಳಿಂದ ನೋಂದಣಿ ಇಲ್ಲದೆ ಫಾರಂ ನಡೆಸುತ್ತಿದ್ದರಲ್ಲದೆ, ಸ್ಥಳದಲ್ಲೇ ಕೋಳಿಗಳನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದರು. ಕೋಳಿ ಫಾರಂನಲ್ಲಿ ಕೋಳಿಗಳನ್ನು ಕತ್ತರಿಸಿ ಮಾರಾಟ ಮಾಡಿದರೆ ಆ ಫಾರ್ಮ್ ಅನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ನೋಂದಾಯಿಸಬೇಕು ಎಂಬ ನಿಯಮವಿದೆ. ಈ ಬಗ್ಗೆ ತನಗೆ ತಿಳಿದಿಲ್ಲ, ಇಲಾಖಾ ತನಿಖೆ ನಡೆಸಿ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಒ ಜಿ.ಕೆ.ದುಬೆ ತಿಳಿಸಿದರು.

ಇಬ್ಬರ ಸೊಂಟಕ್ಕೆ ಪೆಟ್ರೋಲ್ ಇಂಜೆಕ್ಷನ್ ಕೊಡಲಾಗಿತ್ತು, ಅದು ರಕ್ತದೊಳಗೆ ಸೇರಿದರೆ ಮೂತ್ರಪಿಂಡದ ಮೂಲಕ ಹೃದಯದೊಳಗೆ ಸಂಚರಿಸುತ್ತದೆ, ನಿಧಾನವಾಗಿ ನರಮಂಡಲದ ತುಂಬೆಲ್ಲಾ ಹಬ್ಬಿದರೆ ಪಾರ್ಶ್ವವಾಯು ಅಪಾಯವಾಗುವ ಸಾಧ್ಯತೆ ಇದೆ. ಈ ಪ್ರಕರಣದ ವಿಚಾರವಾಗಿ ಆರು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ