AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!

Koppal RTO Bribe: ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!
ಕೊಪ್ಪಳದಲ್ಲಿ RTO ಅಧಿಕಾರಿಗಳ ದನ ದಾಹ
ದತ್ತಾತ್ರೇಯ ಪಾಟೀಲ್​
| Edited By: ಸಾಧು ಶ್ರೀನಾಥ್​|

Updated on: Aug 17, 2023 | 9:09 AM

Share

ಕೊಪ್ಪಳ, ಆಗಸ್ಟ್​ 17: ಕೊಪ್ಪಳದಲ್ಲಿ (Koppal) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ (RTO) ವಸೂಲಿ ಎಂಬುದು ಎಗ್ಗು ಸಿಗ್ಗಿಲ್ಲದೇ ಮುಂದುವರಿದಿದೆ. RTO ಅಧಿಕಾರಿಗಳ ದನ ದಾಹ , ವಸೂಲಿಗೆ (RTO Bribe) ಬ್ರೇಕ್ ಹಾಕುವವರೇ ಇಲ್ಲವಾಗಿದೆ! ಆದರೆ ಇದರಿಂದ ಮತ್ತೊಂದು ಅನಾಹುತ ಎದುರಾಗಿದೆ. ಆರ್ ಟಿಓ ಅಧಿಕಾರಿಗಳೇನೋ ಹೆದ್ದಾರಿಯಲ್ಲಿ ವಸೂಲಿ ಬಾಜಿಗೆ ಇಳಿದುಬಿಡುತ್ತಾರೆ. ಆದರೆ ಅದೇ ವೇಳೆ ಸರಿಯಾಗಿ ಅದು ಅಪಘಾತಕ್ಕೆ (Accident) ಕಾರಣವಾಗುತ್ತಿದೆಯಾ ಎಂಬ ಆತಂಕ ಅಲ್ಲಿ ಮನೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 50 ರ ಮೇಲೆ ಹತ್ತಾರು ವಾಹನಗಳನ್ನ ಒಮ್ಮಲೇ ನಿಲ್ಲಿಸೋ RTO ಅಧಿಕಾರಿಗಳು ಬೃಹತ್ ಗಾತ್ರದ ವಾಹನ ನಿಲ್ಲಿಸಿಬಿಟ್ಟು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದ್ದಾರೆ.

ಅಲ್ಲಿ RTO ಅಧಿಕಾರಿಗಳ ದನ ದಾಹಕ್ಕೆ ಕೊನೆ ಮೊದಲೇ ಇರುವುದಿಲ್ಲ. ಎನ್ ಹೆಚ್ ಕುಷ್ಟಗಿ ಬಳಿಯಂತೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಕೊಪ್ಪಳ ತಾಲೂಕಿನ ಶಹಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳನ್ನ ಯರ್ರಾಬಿರ್ರಿ ತಡೆದು ಅಧಿಕಾರಿಗಳು ಹಣ ವಸೂಲಿಗಾಗಿ ಇಳಿದುಬಿಡುತ್ತಾರೆ. ಟಿಪ್ಪರ್, ಲೋಡ್ ಲಾರಿ, ಕಂಟೇನರ್ ಹೀಗೆ ಭಾರಿ ಗಾತ್ರದ ವಾಹನಗಳು ಅಲ್ಲಿ ನಿಲುಗಡೆಯಾಗುತ್ತವೆ. ಅದಾದ ಮೇಲೆ RTO ಅಧಿಕಾರಿಗಳಿಗೆ ಹಣ ನೀಡಿ ಒಮ್ಮೆಲೆ ಮುನ್ನುಗ್ಗುವ ವಾಹನಗಳು ಹೆದ್ದಾರಿಯಲ್ಲಿ ಓವರ್ ಸ್ಪೀಡ್ ಹಾವಳಿ ಎಬ್ಬಿಸುತ್ತವೆ.

Also Read: Karnataka Breaking Kannada News Live: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ; ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬಿಳುತ್ತೆ ದಂಡ

ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್