ಬೆಂಗಳೂರು:ಇದು ಅದೃಷ್ಟದ ಕಲ್ಲು ಎಂದು ಮಾರಲು ಯತ್ನಿಸಿದ ಮೂವರು ಕಿರಾತಕರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್,ಹರೀಶ್,ತಿರುಪತಪ್ಪ ಬಂಧಿತ ಆರೋಪಿಗಳು.
ಗ್ರೀನ್ ಅವೆಂಚರ್ಸ್ ಸ್ಟೋನ್ ಎಂದು ಅಂಜನಾನಗರ ಮುಖ್ಯ ರಸ್ತೆಯಲ್ಲಿ ಆರೋಪಿಗಳು ಮಾರಾಟದ ದಂಧೆಗಿಳಿದಿದ್ದರು. ಹಸಿರು ಬಣ್ಣದ ಕಲ್ಲನ್ನ ಮನೆಯಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತೆ ಎಂದು ಜನರನ್ನು ನಂಬಿಸಿ, ಮಾರಲು ಯತ್ನಿಸಿದ್ದ ಈ ಖದೀಮರನ್ನು ಬ್ಯಾಡರಹಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳಿಂದ 1 ಕೆ.ಜಿ ತೂಕದ ಕಲ್ಲು ಹಾಗೂ ಆಟೋವನ್ನು ಸಹ ವಶಕ್ಕೆ ಪಡೆದಿದ್ದಾರೆ. ಘಟನೆಯ ನಂತರ ದಂಧೆಯ ಹಿಂದಿರುವ ಮಾಸ್ಟರ್ ಮೈಂಡ್ ಮನ್ಸೂರ್ ನಾಪತ್ತೆಯಾಗಿದ್ದು,ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.