ಬೆಂಗಳೂರು: ಮೀನಿನ ಬಾಕ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರ ಸೆರೆ

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 11 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೀನಿನ ಬಾಕ್ಸ್ ಒಳಗೆ ಗಾಂಜಾ ಸಾಗಾಟ ಮಾಡುತ್ತಿದ್ದರು.

ಬೆಂಗಳೂರು: ಮೀನಿನ ಬಾಕ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರ ಸೆರೆ
ಸಾಂದರ್ಭಿಕ ಚಿತ್ರ
Edited By:

Updated on: Jul 04, 2021 | 11:48 AM

ಬೆಂಗಳೂರು: ಮೀನಿನ ಬಾಕ್ಸ್ ಒಳಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮೂರು ಲಕ್ಷ ಮೌಲ್ಯದ 11 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಒರಿಸ್ಸಾ ಮೂಲದ ದಿವಾಕರ್, ಬೆಂಗಳೂರಿನ ಸುದರ್ಶನ್, ವಿಶ್ವನಾಥ್ ಬಂಧಿತ ಆರೋಪಿಗಳು.

ಆರೋಪಿಗಳಿಗೆ ದಿವಾಕರ್ ಒರಿಸ್ಸಾದಿಂದ ಗಾಂಜಾ ಸಪ್ಲೈ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತ ಮಾಜಿ ಸೈನಿಕನೊಬ್ಬರ ಪುತ್ರನಾಗಿದ್ದಾನೆ. ದಿವಾಕರ್​ನಿಂದ ಪಡೆದ ಗಾಂಜಾವನ್ನು ಸುದರ್ಶನ್ ಮುಖಾಂತರ ವಿಶ್ವನಾಥ್ ಮಾರಾಟ ಮಾಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಒರಿಸ್ಸಾದ ಮಲ್ಕನರಿ ಬೆಟ್ಟದಲ್ಲಿ ಬೆಳೆಯುವ ಗಾಂಜಾವನ್ನ ಲಾರಿ, ಬಸ್, ಟ್ರೈನ್ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರತಿಷ್ಠಿತ ಕಾಲೇಜು, ಕಾರ್ಖಾನೆ ಹಾಗೂ ಡಾಬಗಳ ಬಳಿ ಬಂಧಿತರು ಗಿರಾಕಿಗಳಿಗೆ ಮಾರುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮನೆಯ ಪಕ್ಕದ ಗಲ್ಲಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಬೆಂಗಳೂರಿನಲ್ಲೂ ಓರ್ವ ಬಂಧನ

(Three people arrested for Ganja supply in North Bengaluru’s Madanayakanahalli)