ಶೋಕಿ ಮಾಡಲು ಹಣ ಬೇಕೆಂದು ಸೂಪರ್​ ಮಾರ್ಕೆಟ್​ಗಳ​ಲ್ಲಿ ಕಳವು ಮಾಡುತ್ತಿದ್ದ ಮೂವರು ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Dec 24, 2020 | 10:19 AM

ಆರೋಪಿಗಳು ಕಳ್ಳತನ ಮಾಡಲು ಸುಮಾರು ಒಂದು ವಾರಗಳ ಕಾಲ‌ ನಿಗಾ ವಹಿಸಿ ರಾತ್ರಿ ಪಾಳಿಯ ಸೆಕ್ಯುರಿಟಿಗಳ ಚಲನವಲನಗಳನ್ನು ಗಮನಿಸಿ, ರಾತ್ರಿ 2 ರಿಂದ 3 ಗಂಟೆ ವೇಳೆಗೆ ಕನ್ನ ಹಾಕುತ್ತಿದ್ದರು.

ಶೋಕಿ ಮಾಡಲು ಹಣ ಬೇಕೆಂದು ಸೂಪರ್​ ಮಾರ್ಕೆಟ್​ಗಳ​ಲ್ಲಿ ಕಳವು ಮಾಡುತ್ತಿದ್ದ ಮೂವರು ಅರೆಸ್ಟ್
ಬಂಧಿತ ಆರೋಪಿಗಳು
Follow us on

ಬೆಂಗಳೂರು: ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡು ಶೋಕಿ ಮಾಡಲು ಹಣ ಬೇಕು ಎಂಬ ಕಾರಣಕ್ಕೆ ಸೂಪರ್​ ಮಾರ್ಕೆಟ್​, ಮಾಲ್​ಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಮನ್ಸೂರ್(26), ಇಮ್ರಾನ್(24), ಜಿಲ್ಲಾನ್(25) ಬಂಧಿತರಾಗಿದ್ದು, ಇವರಿಂದ ಡಿಯೋ ಬೈಕ್​, ಮೊಬೈಲ್, 50 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಲಾಕ್​ಡೌನ್​ ವೇಳೆ ಕೆಲಸ ಕಳೆದುಕೊಂಡಿದ್ದ ಈ ಮೂವರು ಶಾಪಿಂಗ್ ಮಾಲ್​, ಸೂಪರ್​ ಮಾರ್ಕೆಟ್​ಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಕದ್ದ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದರು. ಬೆಂಗಳೂರಿನ ಹೆಸರಘಟ್ಟ ರಸ್ತೆಯ 8ನೇ ಮೈಲಿ ಬಳಿ ಇರುವ ರಿಲಯನ್ಸ್ ಸೂಪರ್ ಮಾರ್ಟ್‌ಗೆ ನುಗ್ಗಿದ್ದ ಇವರು ಬಾತ್ ರೂಂ ಬಾಗಿಲು ಮುರಿದು ಒಳಗೆ ಹೊಕ್ಕಿದ್ದರು.

ಅದರಲ್ಲಿ ಓರ್ವ ಕ್ಯಾಶ್ ಕೌಂಟರ್ ಒಳಗೆ ಹೋಗಿ ಕ್ಯಾಶ್ ಬಾಕ್ಸ್ ಒಡೆದಿದ್ದ. ಅಂದು ಸುಮಾರು 35,000 ರೂ. ನಗದು ಸೇರಿ ಒಟ್ಟು 85,000ರೂ. ಮೌಲ್ಯದ ಮೊಬೈಲ್, ಟ್ಯಾಬ್ ದೋಚಿದ್ದರು. ಸೂಪರ್ ಮಾರ್ಕೆಟ್ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲಗುಂಟೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಈ ಆರೋಪಿಗಳು ಕಳ್ಳತನ ಮಾಡಲು ಸುಮಾರು ಒಂದು ವಾರಗಳ ಕಾಲ‌ ನಿಗಾ ವಹಿಸಿ ರಾತ್ರಿ ಪಾಳಿಯ ಸೆಕ್ಯುರಿಟಿಗಳ ಚಲನವಲನಗಳನ್ನು ಗಮನಿಸಿ, ರಾತ್ರಿ 2 ರಿಂದ 3 ಗಂಟೆ ವೇಳೆಗೆ ಕನ್ನ ಹಾಕುತ್ತಿದ್ದರು.

ಮದ್ಯಪಾನ ರಂಪಾಟದ ಜೊತೆಗೆ DySP ಲಕ್ಷ್ಮೀ ವಿರುದ್ಧ ಇತ್ತು ಮತ್ತೊಂದು ಗಂಭೀರ ಆರೋಪ!

Published On - 7:37 pm, Wed, 23 December 20