ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ

ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಪೊಲೀಸರಿಂದ ಭರ್ಜರಿ ಬೇಟೆ: ನೈಜಿರಿಯಾ ಗ್ಯಾಂಗ್ ಅರೆಸ್ಟ್, ₹ 1 ಕೋಟಿ ಮೌಲ್ಯದ MDMA ಮಾತ್ರೆ ಜಪ್ತಿ
ಮಾದಕ ವಸ್ತು ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ನೈಜಿರಿಯನ್ ಪ್ರಜೆಗಳು.
Follow us
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 24, 2020 | 1:46 PM

ಬೆಂಗಳೂರು: ಪೊಲೀಸರ ಖೆಡ್ಡಾಗೆ ನೈಜಿರಿಯಾದ ಗ್ಯಾಂಗ್ ಸಿಕ್ಕಿಬಿದ್ದಿದೆ. ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದವರನ್ನು ಸೆರೆಹಿಡಿದು ಸುಮಾರು ₹ 1 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಸೆಲೆಬ್ರೇಷನ್ ನಡೆಯಲಿದೆ. ಇದನ್ನೇ ಗುರಿಯಾಗಿಟ್ಟುಕೊಂಡು ದುಡ್ಡು ಮಾಡಲು ಫೀಲ್ಡ್​ಗಿಳಿದಿದ್ದ ನೈಜಿರಿಯನ್ ಮೂಲದ ಖತರ್ನಾಕ್ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಾರ್ಕ್ ನೆಟ್ ವೆಬ್ ಮೂಲಕ ದಂಧೆ ನಡೆಸುತ್ತಿದ್ದರು. ಡಾರ್ಕ್ ವೆಬ್ ಮೂಲಕ ಬ್ರಿಟನ್​ನಿಂದ ಟ್ಯಾಬ್ಲೆಟ್ ಸರಬರಾಜಾಗುತ್ತಿತ್ತು. ಬಳಿಕ ಈ ಗ್ಯಾಂಗ್ ಅದನ್ನು ನಗರದಲ್ಲಿ ಮಾರಾಟ ಮಾಡ್ತಿತ್ತು.

ಇವರ ಬಳಿ ವೀಸಾ ಮತ್ತು ಸೂಕ್ತವಾದ ಪಾಸ್ ಪೋರ್ಟ್ ಇರಲಿಲ್ಲ. ಆದರೂ ಅಕ್ರಮವಾಗಿ ನೆಲಸಿ ಮಾದಕ ವಸ್ತು ಮಾರಾಟ ಮಾಡ್ತಿದ್ರು. ಕ್ರಿಸ್​ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

ಬಾಗ್ಮನೆ ಟೆಕ್ ಪಾರ್ಕ್ ಬಳಿ ಇರುವ ಕೃಷ್ಣಪ್ಪ ಗಾರ್ಡನ್ ಹತ್ತಿರ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಬೈಯಪ್ಪನಹಳ್ಳಿ ಪೊಲೀಸರು ನೈಜೀರಿಯನ್ ಗ್ಯಾಂಗ್​ಗೆ ಸೇರಿದವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3,300 MDMA ಮಾತ್ರೆ, 600 ಗ್ರಾಂ ಟ್ಯಾಬ್ಲೆಟ್ ಪೌಡರ್ ಸೇರಿ ಒಟ್ಟು ₹ 1 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವಿವರ ನೀಡಿದ್ದಾರೆ.

ಮಣಿಪಾಲ: 10 ಲಕ್ಷ ರೂಪಾಯಿ ಮೌಲ್ಯದ MDMA Drugs ಸಂಗ್ರಹಿಸಿದ್ದ ಯುವಕ ಅರೆಸ್ಟ್​

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್