ಬಿಹಾರದಲ್ಲಿ ತ್ರಿವಳಿ ಕೊಲೆ ನಡೆದಿದೆ, ಹುಚ್ಚು ಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಸಹೋದರಿ, ತಂದೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ, 55 ವರ್ಷದ ತಾರಕೇಶ್ವರ್ ಅವರ ಇಬ್ಬರು ಹೆಣ್ಣುಮಕ್ಕಳಾದ ಚಾಂದಿನಿ ಕುಮಾರಿ ಹಾಗೂ ಅಭಾ ಕುಮಾರಿ ಹಾಗೂ ಪತ್ನಿ ಎಲ್ಲರೂ ಮನೆಯಲ್ಲಿ ಮಲಗಿದ್ದರು.
ಆಗ ಮೂವರ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿ ತಾರಕೇಶ್ವರ್ ಪತ್ನಿಯನ್ನು ಕೊಲ್ಲಲು ಬಂದಾಗ ಅವರಿಗೆ ಎಚ್ಚರವಾಗಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಆರೋಪಿ ಪ್ರೇಯಸಿಯ ತಾಯಿಯ ಭುಜದ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕೊಲೆಯ ಹಿಂದೆ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ತಾರಕೇಶ್ವರ್ ಪತ್ನಿ ಶೋಭಾ ದೇವಿಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಅನುಮಾನದ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಮನೆಯವರೆಲ್ಲರೂ ತಾರಸಿಯ ಮೇಲೆ ಮಲಗಿದ್ದರು, ಇಬ್ಬರು ಆರೋಪಿಗಳು ಬಂದು ಹರಿತವಾದ ಆಯುಧದಿಂದ ಒಬ್ಬರಾದ ಮೇಲೆ ಒಬ್ಬರ ಕತ್ತನ್ನು ಸೀಳಿ ಕೊಲೆ ಮಾಡಿದ್ದಾರೆ.
ಮತ್ತಷ್ಟು ಓದಿ: Shocking News: ಗೆಳೆಯನ ತಾಯಿಯ ಮೇಲೆ ಯುವಕನಿಂದ ಅತ್ಯಾಚಾರ; ಹೇಯ ಕೃತ್ಯ ಬಯಲು
ಬಳಿಕ ಶೋಭಾದೇವಿ ಹತ್ಯೆ ಮಾಡಲು ಯತ್ನಿಸಿದಾಗ ಆಕೆ ಓಡಿಹೋಗಲು ಪ್ರಯತ್ನಿಸಿದಳು ಆಗ ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಆರೋಪಿ ರೊಷನ್ ಹಾಗೂ ಚಾಂದಿನಿ ಆಗಾಗ ಮಾತನಾಡುತ್ತಿದ್ದರು, ಆದರೆ ಕುಟುಂಬದವರ ಮಾತಿನಿಂದಾಗಿ ಅವರಿಬ್ಬರು ಮಾತನಾಡುವುದನ್ನು ನಿಲ್ಲಿಸಿದ್ದರು.
ಆಕೆ ನನ್ನನ್ನು ಮದುವೆಯಾಗದಿದ್ದರೆ ಬೇರೆಯವರನ್ನು ಮದುವೆಯಾಗಲು ನಾನು ಬಿಡುವುದಿಲ್ಲ ಎಂದು ಹೇಳಿ ಸ್ನೇಹಿತನ ಜತೆ ಮನೆಗೆ ಹೋಗಿ ಮೂವರನ್ನು ಹತ್ಯೆ ಮಾಡಿದ್ದ. ಪೊಲೀಸರು ಸುಧಾಂಶು ಅಲಿಯಾಸ್ ರೋಷನ್ನನ್ನು ಬಂಧಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Wed, 17 July 24