ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಫೈಟ್ ಸೀನ್​ ಕತ್ತರಿಗೆ ಒತ್ತಾಯ

| Updated By: Rakesh Nayak Manchi

Updated on: Oct 31, 2022 | 1:10 PM

ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಹೆಡ್​ಬುಷ್ ಸಿನಿಮಾದ ವಿರುದ್ಧ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಆ ಒಂದು ಫೈಟಿಂಗ್ ಸೀನ್ ಅನ್ನು ತೆಗೆದುಹಾಕುವಂತೆ ಒತ್ತಾಯ ಮಾಡಲಾಯಿತು.

ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಫೈಟ್ ಸೀನ್​ ಕತ್ತರಿಗೆ ಒತ್ತಾಯ
ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಪೈಟ್ ಸೀನ್ ಕತ್ತರಿಗೆ ಒತ್ತಾಯ
Follow us on

ತುಮಕೂರು: ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದು, ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸಿನಿಮಾದಲ್ಲಿನ ವಿವಾದಿತ ದೃಶ್ಯಕ್ಕೆ ಕೂಡಲೇ ಕತ್ತರಿ ಹಾಕುವಂತೆ ಆಗ್ರಹಿಸಿ ತುಮಕೂರಿನ ಮಾರುತಿ ಚಿತ್ರಮಂದಿರ ಬಳಿ ರಾಜ್ಯ ಕಲಾವಿದರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಸಿನಿಮಾದಲ್ಲಿ ವೀರಗಾಸೆ ಕಲಾವಿದನಿಗೆ ಹೊಡೆಯುವ ದೃಶ್ಯವಿದ್ದು, ಇದಕ್ಕೆ ಕತ್ತರಿ ಹಾಕುವಂತೆ ಒತ್ತಾಯಿಸಿ ಪಂಚ ವಾದ್ಯ ಊದುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪಂಚ ವಾದ್ಯ ಊದುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು ಪ್ರತಿಭಟನೆಯಲ್ಲಿ ಭಾಗಿಯಾದರು. ಸುಮಾರು ಅರ್ಧ ಗಂಟೆಗಳ ಕಾಲ ನಿರಂತರವಾಗಿ ಪಂಚ ವಾದ್ಯ ಮೊಳಗಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಸಿನಿಮಾದ ನಿರ್ದೇಶಕ ಅಗ್ನಿಶ್ರೀಧರ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು.

ಹೆಂಡತಿ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಗಂಡನನ್ನು ಕೊಚ್ಚಿ ಕೊಲೆ

ಬೆಳಗಾವಿ: ಹೆಂಡತಿ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಗಂಡನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಮಾರುತಿ ಜಾಧವ್(40) ಕೊಲೆಯಾದ ವ್ಯಕ್ತಿಯಾಗಿದ್ದು, ನೆರೆಮನೆ ನಿವಾಸಿ ಪ್ರಶಾಂತ್ ನಾರ್ವೇಕರ್​(35) ಕೊಲೆ ಆರೋಪಿಯಾಗಿದ್ದಾನೆ. ಕೆಲವು ದಿನಗಳ ಹಿಂದೆ ಮಾರುತಿ ಪತ್ನಿಯನ್ನು ಪ್ರಶಾಂತ್​ ಚುಡಾಯಿಸಿದ್ದನು. ಈ ಬಗ್ಗೆ ಭಾನುವಾರ ಸಂಜೆ ಮಾರುತಿ ಪ್ರಶಾಂತ್​ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆರಂಭಗೊಂಡ ಇಬ್ಬರ ನಡುವಿನ ಜಗಳ ಮಾರುತಿಯ ಕೊಲೆಯಲ್ಲಿ ಅಂತ್ಯಗೊಂಡಿತು.

ಕೊಲೆಯಾದ ಮಾರುತಿ ಜಾಧವ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಪ್ರಶಾಂತ್‌ನನ್ನ ಜೀವ ಸಮೇತ ಉಳಿಸದಂತೆ ಪತ್ನಿ ಸುಪ್ರಿಯಾ ಆಗ್ರಹಿಸುತ್ತಿದ್ದಾರೆ. ಮಾರುತಿ ಮೇಲೆ ಕಲ್ಲೆಸೆದು ಹಲ್ಲೆ ನಡೆಸಲಾಗಿದ್ದು, ಮನೆಯ ಮುಂಭಾಗದಲ್ಲಿ ನಿಂತಿದ್ದ ಟಾಟಾ ಏಸ್​ ಕಾರಿಗೂ ಕಲ್ಲು ತೂರಾಲಾಗಿದೆ. ಗಲಾಟೆಯ ನಂತರ ಮನೆಯ ಮುಂದೆಯೇ ಮಾರುತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷದಿಂದ ಆರೋಪಿ ಪ್ರಶಾಂತ್ ಮಾರುತಿ ಪತ್ನಿಯನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಂತೆ.

ಇಬ್ಬರ ಹಿಸತ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ನಗರದ ಶಂಕರಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ 1.1 ಕೆಜಿ ಡ್ರಗ್‌ ವಶಕ್ಕೆ ಪಡೆದಿದ್ದಾರೆ. ನೈಜೀರಿಯಾ ಮೂಲದ ತಾನೂಸೆಕಾ, ಎಗ್ವಾತು ಇಪೇನಿ ಬಂಧಿತ ಆರೋಪಿಗಳಾಗಿದ್ದಾರೆ. ಅಂಚೆ ಕಚೇರಿ, ಡಾರ್ಕ್​ವೆಬ್, ಕೋರಿಯರ್ ಮೂಲಕ ಡ್ರಗ್ಸ್​ ಆಮದು ಮಾಡಿಕೊಳ್ಳುತ್ತಿದ್ದ ಆರೋಪಿಗಳು ಅದನ್ನು ಐಟಿ-ಬಿಟಿ ಸೆಕ್ಟರ್​ಗಳ ಭಾಗದಲ್ಲೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದರು. ಪೊಲೀಸರಿಗೆ ಅನುಮಾನ ಬಾರದಂತೆ ವಾಟ್ಸಫ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಅಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳ ಬಳಿಯಿಂದ ಡ್ರಗ್ಸ್ ಖರೀದಿ ನೆಪದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ

ಬೆಂಗಳೂರು: ನಗರದ ಜಯನಗರ ಠಾಣಾ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಉಡುಪಿಯ ಬೈಂದೂರಿನಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಮಾಹಿತಿ ಹೊರಬಿದ್ದಿದೆ. ಬಂಧಿತ ಆರೋಪಿಗಳಾದ ಬಂಟ್ವಾಳ ಮೂಲದ ಮೊಹಮ್ಮದ್ ರಫೀಕ್ ಮತ್ತು ಶಿವಾಜಿನಗರದ ಮೊಹಮ್ಮದ್ ಹನೀಫ್, ಬೆಂಗಳೂರಿನಿಂದ ಜೂಮ್ ಕಾರ್ ಬುಕ್ ಮಾಡಿಕೊಂಡು ಬೈಂದೂರಿಗೆ ತೆರಳಿದ್ದಾರೆ. ಈ ವೇಳೆ ಚಂದನ್, ಜಬಿ, ಮಣಿ ಮತ್ತು ನಿಯಾಜ್ ಎಂಬುವರನ್ನು ಕರೆದುಕೊಂಡು ಹೋಗಿದ್ದರು.

ಹಾಕಿದ ಪ್ಲಾನ್​ನಂತೆ ಕಿಟಕಿ ಸರಳುಗಳನ್ನು ಕಟ್ ಮಾಡಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಳಗೆ ಆರೋಪಿಗಳು ನುಗ್ಗಿದ್ದಾರೆ. ಆದರೆ ಲಾಕರ್ ಓಪನ್ ಮಾಡಲು ಆಗದೆ ಅಲ್ಲಿಂದ ವಾಪಸ್ ಆಗಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಬಂಧಿತರ ವಿರುದ್ಧ ಈಗಾಗಲೇ 15 ರಾಬರಿ ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್ 14 ರಂದು ಜಯನಗರ ಶಾಲಿನಿ ಮೈದಾನ ಬಳಿ ಸರಗಳ್ಳತನ ಮಾಡಿದ್ದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Mon, 31 October 22