Crime News: ಗಂಡನ ಕಿರುಕುಳಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಕ್ಷುಲ್ಲಕ ಕಾರಣಕ್ಕೆ ಗೆಳೆಯನ ಕೊಲೆ
ಆತ್ಮಹತ್ಯೆಗೂ ಮುನ್ನ ಅರ್ಪಿತಾ ಸೆಲ್ಫಿ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಗ ಮದನ್ ‘ಅಪ್ಪ’ ಎಂದು ಕೂಗಿಕೊಂಡಿರುವದನ್ನು ನೋಡಿದವರ ಕಣ್ಣು ಮಂಜಾಗುತ್ತಿದೆ.
ಚಿತ್ರದುರ್ಗ: ಇಬ್ಬರು ಮಕ್ಕಳ ಜೊತೆಗೆ ಚೆಕ್ ಡ್ಯಾಮ್ಗೆ ಹಾರಿ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಅರ್ಪಿತಾ (28), ಮಾನಸ (6), ಮದನ್ (4) ಮೃತರು. ಇವರೆಲ್ಲರೂ ಜಾನಕಲ್ ತಾಂಡಾ ನಿವಾಸಿಗಳು. ಪತ್ನಿ ಅರ್ಪಿತಾ ಮೇಲೆ ಅನುಮಾನ ಪಡುತ್ತಿದ್ದ ಪತಿ ಮಂಜಾನಾಯ್ಕ್ ಅನುಮಾನ ಪಡುತ್ತಿದ್ದ. ಕುಡಿದು ಹಲ್ಲೆ ನಡೆಸುತ್ತಿದ್ದ. 8 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಅರ್ಪಿತಾ ಸೆಲ್ಫಿ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಮಗ ಮದನ್ ‘ಅಪ್ಪ’ ಎಂದು ಕೂಗಿಕೊಂಡಿರುವದನ್ನು ನೋಡಿದವರ ಕಣ್ಣು ಮಂಜಾಗುತ್ತಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ರಾಮಾನುಜ ರಸ್ತೆಯಲ್ಲಿ ಮತ್ತೆ ಮೊಸಳೆ
ಮೈಸೂರು: ನಗರದ ರಾಮಾನುಜ ರಸ್ತೆಯ ಮೋರಿಯಿಂದ ಮತ್ತೆ ಮೊಸಳೆಯೊಂದು ಮೇಲೆ ಬಂದಿದ್ದು, ಜನರಲ್ಲಿ ಆತಂಕ ಮೂಡಿದೆ. 10 ದಿನಗಳ ಹಿಂದಷ್ಟೇ ಇಲ್ಲಿ ಮೊಸಳೆ ಕಂಡುಬಂದಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡಿದ್ದರಾದರೂ ಮೊಸಳೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಅದೇ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಮೊಸಳೆಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕುಡಿದ ಅಮಲಿನಲ್ಲಿ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ
ಬೆಂಗಳೂರು: ಕುಡಿದ ಅಮಲಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆಯು ನಗರದ ಪಿಲ್ಲಗಾನಹಳ್ಳಿಯಲ್ಲಿ ನಡೆದಿದೆ. ಸಫೀರ್ ಅಹ್ಮದ್ (23) ಕೊಲೆಯಾದವರು. ಆರೋಪಿ ಸೈಯದ್ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಸಫೀರ್ ಅಹ್ಮದ್ ಮತ್ತು ಸೈಯದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳುಗಳಿಂದ ಜತೆಗೆ ಕೆಲಸ ಮಾಡುತ್ತಿದ್ದ ಅವರ ನಡುವೆ ರಾತ್ರಿ ಮದ್ಯ ಸೇವನೆ ವೇಳೆ ಜಗಳ ಆರಂಭವಾಗಿದೆ. ಸಿಟ್ಟಿಗೆದ್ದ ಸೈಯದ್ ಸಫೀರ್ ಅಹ್ಮದ್ನನ್ನು ಕೊಂದಿದ್ದಾನೆ.
ಶ್ರೀನಿವಾಸಪುರ: ಕೋಳಿ ಪಂದ್ಯ ಆಡುತ್ತಿದ್ದವರ ಬಂಧನ
ಕೋಲಾರ: ಶ್ರೀನಿವಾಸಪುರ ತಾಲೂಕಿನ ವೆಂಕಟಾಪುರ ಅರಣ್ಯ ಪ್ರದೇಶದಲ್ಲಿ ಕೋಳಿ ಪಂದ್ಯ ಆಡುತ್ತಿದ್ದ 7 ಜನರ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 16 ಸಾವಿರ ನಗದು, 10 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.
Published On - 8:26 am, Mon, 31 October 22