ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ಮಿಂಚಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಲೋಕದ ಕನಸು ಕಾಣುವವರು ಅನೇಕರಿದ್ದಾರೆ. ಆದರೆ ಅಂಥವರಿಗೆ ಮೋಸ ಮಾಡುವವರ ಜಾಲವೂ ದೊಡ್ಡದಿದೆ. ಈ ರೀತಿ ಕನಸು ಹೊತ್ತುಕೊಂಡ ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಹಿಂದಿ ಕಿರುತೆರೆಯ ಖ್ಯಾತ ನಟ ಪರ್ಲ್ ವಿ. ಪುರಿ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಲ್ ವಿ. ಪುರಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಅತ್ಯಾಚಾರ ಆರೋಪ ಹೊತ್ತಿರುವ ಪರ್ಲ್ ವಿ. ಪುರಿ ಈಗ ಪೊಲೀಸರ ವಶದಲ್ಲಿದ್ದಾರೆ. ಟಿವಿ ಸೀರಿಯಲ್ಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ, ಬಾಲಕಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣ ಹಳೆಯದಾಗಿದ್ದರೂ ಕೂಡ ಬಾಲಕಿ ಮತ್ತು ಆಕೆಯ ತಾಯಿ ಈಗ ದೂರು ನೀಡಿದ್ದಾರೆ. ಅದರ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಳೆದ 9 ವರ್ಷದಿಂದ ಕಿರುತೆರೆಯಲ್ಲಿ ಪರ್ಲ್ ವಿ. ಪುರಿ ಸಕ್ರಿಯರಾಗಿದ್ದಾರೆ. ಬಾಲಕಿಯ ಜೊತೆ ಪರಿಚಯ ಬೆಳೆಸಿಕೊಂಡು ಇಂಥ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸತ್ಯಾಸತ್ಯತೆ ಏನೆಂಬುದು ತನಿಖೆ ನಂತರವೇ ತಿಳಿದುಬರಬೇಕಿದೆ. ಹಿಂದಿಯ ಹಲವು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಪರ್ಲ್ ವಿ. ಪುರಿ ಅವರಿಗೆ ‘ನಾಗಿನ್ 3’ ಸೀರಿಯಲ್ನಿಂದ ಹೆಚ್ಚು ಖ್ಯಾತಿ ಸಿಕ್ಕಿತ್ತು.
‘ನಾಗಿನ್ 3’ ಧಾರಾವಾಹಿಯಲ್ಲಿ ಅವರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಅನಿತಾ ಅವರು ಈ ಸುದ್ದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಪರ್ಲ್ ವಿ. ಪುರಿ ನನಗೆ ಚೆನ್ನಾಗಿ ಗೊತ್ತು. ಅವರ ಈ ರೀತಿ ಮಾಡಿರಲು ಸಾಧ್ಯವೇ ಇಲ್ಲ. ಈ ಸುದ್ದಿ ನಿಜವಲ್ಲ. ಶೀಘ್ರದಲ್ಲೇ ಸತ್ಯ ಹೊರಬರಲಿದೆ’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Dear privileged Girls and Women,
Do not make the heinous allegations of rape and molestation so frivolous and casual that it ceases to hold any value for posterity.@pearlvpuri You have my support✨.— NIA SHARMA (@Theniasharma) June 5, 2021
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ.
ಇದನ್ನೂ ಓದಿ:
ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ಜಾಲ ಬಹಿರಂಗ