ಮಂಗಳೂರು, ಜುಲೈ 28: ಕುಟುಂಬದೊಂದಿಗೆ ಹೊಟೇಲ್ಗೆ ಹೋಗಿ ವಾಪಸ್ ಆಗುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ನಲ್ಲಿ (BC Road) ನಿನ್ನೆ (ಜುಲೈ 27) ರಾತ್ರಿ ನಡೆದಿದೆ. ಮುಸ್ಲಿಂ-ಹಿಂದೂ ಹುಡುಗಿಯರನ್ನು ಎಲ್ಲಿ ಕರೆದುಕೊಂಡು ಹೋಗಿದ್ದೀಯಾ? ಎಂದು ಪ್ರಶ್ನಿಸಿ ಹಲ್ಲೆಗೆ (Assault) ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ಐಎ ತನಿಖೆ ನಡೆಸುತ್ತಿದೆ. ಈ ವಿಭಾಗದಲ್ಲಿ ಬಂಟ್ವಾಳ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಕುಮಾರ್ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಿಸಿರೋಡಿನಲ್ಲಿರುವ ಪೋಲೀಸ್ ವಸತಿಗೃಹದಲ್ಲಿ ತನ್ನ ಪತ್ನಿ ಹಾಗೂ ಆಕೆಯ ಅಕ್ಕನೊಂದಿಗೆ ತಂಗಿದ್ದರು.
ಇದನ್ನೂ ಓದಿ: Dakshina Kannada: ಚಿನ್ನಕ್ಕಾಗಿ ಅಜ್ಜ-ಅಜ್ಜಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಂಗಳೂರಿನಲ್ಲಿ ಸಿಕ್ಕಿಬಿದ್ದ
ನಿನ್ನೆ ರಾತ್ರಿ ಕುಮಾರ್ ಕುಟುಂಬ ಸಹಿತವಾಗಿ ಊಟಕ್ಕೆ ಬಿಸಿರೋಡಿನ ಹೋಟೆಲ್ ಒಂದಕ್ಕೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಕುಮಾರ್ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದು ಅವ್ಯಾಚ್ಯವಾಗಿ ಬೈದಿದ್ದಾರೆ. ನೀನು ಮುಸ್ಲಿಂ ಹಿಂದೂ ಹುಡುಗಿಯರನ್ನು ಎಲ್ಲಿ ಕರೆದುಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ತಾನು ಪೋಲೀಸ್ ಎಂದು ಗೋಗೆರದರೂ ಲೆಕ್ಕಿಸಿದ ಯುವಕರು ಹಲ್ಲೆಗೂ ಮುಂದಾಗಿದ್ದಾರೆ. ಇದೇ ವೇಳೆ ಕುಮಾರ್ ಪತ್ನಿಯ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಘಟನೆ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತುಂಬೆ ನಿವಾಸಿ ಆರೋಪಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಎಂಬವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಕುಟುಂಬವನ್ನು ಆರೋಪಿಗಳು ಫಾಲೋ ಮಾಡಿದ್ದ ದೃಶ್ಯ ರಸ್ತೆ ಪಕ್ಕ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಇರುವಂತೆ, ಪೊಲೀಸ್ ಕುಟುಂಬವನ್ನು ಬೈಕ್ ಮೂಲಕ ಇಬ್ಬರು ಹಿಂಬಾಲಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Fri, 28 July 23