ಅಯ್ಯೋ ಯಾರೋ ಮೊಬೈಲ್ ಕದ್ಬಿಟ್ರು ಎಂದು ದೂರು ಕೊಡೋಕೆ ಹೊರಟಿದ್ದ ಯುವಕ, ಕೆಲವೇ ನಿಮಿಷಗಳಲ್ಲಿ ಬೈಕ್ ಕೂಡ ಕಳೆದುಕೊಂಡ

ಅದೃಷ್ಟ ಕೆಟ್ಟರೆ ಒಂಟೆಯ ಮೇಲೆ ಕುಳಿತವರಿಗೂ ನಾಯಿ ಕಚ್ಚಬಹುದು ಎನ್ನುವ ಗಾದೆ ಇದೆ, ಹಾಗೆಯೇ ದುರಾದೃಷ್ಟವೆಂದರೆ ಇದೇ ನೋಡಿ, ಮೊಬೈಲ್ ಕಳೆದುಕೊಂಡು ದೂರು ಕೊಡಲು ಹೋಗುತ್ತಿದ್ದ ವ್ಯಕ್ತಿ ಇದೀಗ ಬೈಕ್​ನ್ನು ಕೂಡ ಕಳೆದುಕೊಂಡಿದ್ದಾರೆ.

ಅಯ್ಯೋ ಯಾರೋ ಮೊಬೈಲ್ ಕದ್ಬಿಟ್ರು ಎಂದು ದೂರು ಕೊಡೋಕೆ ಹೊರಟಿದ್ದ ಯುವಕ, ಕೆಲವೇ ನಿಮಿಷಗಳಲ್ಲಿ ಬೈಕ್ ಕೂಡ ಕಳೆದುಕೊಂಡ
ಮೊಬೈಲ್ ಕಳ್ಳತನImage Credit source: Deccan Herald
Follow us
|

Updated on: Jul 28, 2023 | 10:46 AM

ಪುಣೆ, ಜುಲೈ 28:  ಅದೃಷ್ಟ ಕೆಟ್ಟರೆ ಒಂಟೆಯ ಮೇಲೆ ಕುಳಿತವರಿಗೂ ನಾಯಿ ಕಚ್ಚಬಹುದು ಎನ್ನುವ ಗಾದೆ ಇದೆ, ಹಾಗೆಯೇ ದುರಾದೃಷ್ಟವೆಂದರೆ ಇದೇ ನೋಡಿ, ಮೊಬೈಲ್ ಕಳೆದುಕೊಂಡು ದೂರು ಕೊಡಲು ಹೋಗುತ್ತಿದ್ದ ವ್ಯಕ್ತಿ ಇದೀಗ ಬೈಕ್​ನ್ನು ಕೂಡ ಕಳೆದುಕೊಂಡಿದ್ದಾರೆ. ಮೊದಲು ಸಹಾಯ ಕೇಳುವ ನೆಪದಲ್ಲಿ ಬಂದು ವ್ಯಕ್ತಿಯ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದರು, ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಮತ್ತೊಬ್ಬ ಬೈಕ್​ ಅನ್ನು ಕೂಡ ಕದ್ದೊಯ್ದಿದ್ದಾನೆ. ಈ ಘಟನೆ ಪುಣೆಯಲ್ಲಿ ನಡೆದಿದೆ.

ಈ ಸಂಬಂಧ ಪುಣೆಯ ಭೋಸಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 406 ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಜುಲೈ 20 ರಂದು ನಡೆದಿದೆ, ಯಾರಿಗೋ ಕರೆ ಮಾಡಬೇಕು ತನ್ನ ಬಳಿ ಮೊಬೈಲ್ ಇಲ್ಲ ಸ್ವಲ್ಪ ಮೊಬೈಲ್ ಕೊಡ್ತೀರಾ ಎಂದು ಕೇಳಿದ್ದರು, ಇವರು ಮೊಬೈಲ್ ಕೊಟ್ಟ ತಕ್ಷಣ ಆತ ಓಡಿ ಹೋಗಿದ್ದಾನೆ.

ಮತ್ತಷ್ಟು ಓದಿ:ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ

ವ್ಯಕ್ತಿ ಪೊಲೀಸ್ ಠಾಣೆಯ ವಿಳಾಸವನ್ನು ಅಲ್ಲಿದ್ದ ಜನರ ಬಳಿ ಕೇಳುತ್ತಿದ್ದರು, ಆ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಸಹಾಯ ಮಾಡುವುದಾಗಿ ಹೇಳಿ ಕರೆದೊಯುತ್ತೇನೆ ಆದರೆ ಅದರ ಪ್ರತಿಯಾಗಿ ಸಿಗರೇಟ್ ಕೊಡಿಸಬೇಕು ಎಂದು ಕೇಳಿದ್ದ, ಸಿಗರೇಟ್ ತರಲು ಆತ ಅಂಗಡಿಗೆ ಹೋದಾಗ ಅಪರಿಚಿತ ಬೈಕ್ ಸಮೇತ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ