ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಸವಾರರು ಮೃತ

|

Updated on: Dec 17, 2019 | 7:32 AM

ದಾವಣಗೆರೆ: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಅರುಣಾ ಸರ್ಕಲ್‌ ಸಿಗ್ನಲ್ ಬಳಿ ನಡೆದಿದೆ. ಬಸವರಾಜಪ್ಪ(42), ಜೆ.ಎಂ.ಸ್ವಾಮಿ(60) ಮೃತ ಸವಾರರು. ಖಾಸಗಿ ಸ್ಟೀಲ್‌ ಫ್ಯಾಕ್ಟರಿಗೆ ಸೇರಿದ ಬಸ್ ಸಿಗ್ನಲ್‌ನಲ್ಲಿ ನಿಂತಿದ್ದ 2 ಬೈಕ್‌ ಮೇಲೆ ಹರಿದಿದೆ. ಗ್ರೀನ್‌ ಸಿಗ್ನಲ್ ಬಿದ್ದ ತಕ್ಷಣ ಚಾಲಕ ಬಸ್ ಚಲಾಯಿಸಿದ್ದಾನೆ. ಖಾಸಗಿ ಬಸ್‌ ಚಾಲಕನ ಬೇಜವಾಬ್ದಾರಿಯಿಂದ ಅಪಘಾತವಾಗಿದ್ದು ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಸವಾರರು ಮೃತ
Follow us on

ದಾವಣಗೆರೆ: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಅರುಣಾ ಸರ್ಕಲ್‌ ಸಿಗ್ನಲ್ ಬಳಿ ನಡೆದಿದೆ. ಬಸವರಾಜಪ್ಪ(42), ಜೆ.ಎಂ.ಸ್ವಾಮಿ(60) ಮೃತ ಸವಾರರು. ಖಾಸಗಿ ಸ್ಟೀಲ್‌ ಫ್ಯಾಕ್ಟರಿಗೆ ಸೇರಿದ ಬಸ್ ಸಿಗ್ನಲ್‌ನಲ್ಲಿ ನಿಂತಿದ್ದ 2 ಬೈಕ್‌ ಮೇಲೆ ಹರಿದಿದೆ.

ಗ್ರೀನ್‌ ಸಿಗ್ನಲ್ ಬಿದ್ದ ತಕ್ಷಣ ಚಾಲಕ ಬಸ್ ಚಲಾಯಿಸಿದ್ದಾನೆ. ಖಾಸಗಿ ಬಸ್‌ ಚಾಲಕನ ಬೇಜವಾಬ್ದಾರಿಯಿಂದ ಅಪಘಾತವಾಗಿದ್ದು ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.