ರಾಜ್ಯದಲ್ಲಿ ಗಾಂಜಾ ಮಾರುತ್ತಿದ್ದ ಅಂತರ್ ರಾಜ್ಯ ಆರೋಪಿ ಅರೆಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಮಾದಕವಸ್ತುಗಳ ಹಾವಳಿ ಹೆಚ್ಚಾಗ್ತಿದೆ. ರಾಜ್ಯದಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಕಿರದ್ ಮಿಶಾಲ್(35) ಬಂಧಿತ ಆರೋಪಿ. ಆರೋಪಿ ಮಿಶಾಲ್ ರೈಲಿನಲ್ಲಿ ಲಗ್ಗೇಜ್ ಟ್ರಾವೆಲ್ ಬ್ಯಾಗ್ ಮುಖಾಂತರ ಕೆಜಿ ಗಟ್ಟಲೆ ಗಾಂಜಾ ತರುತ್ತಿದ್ದ. ನಿರಂತರವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗು ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಅಲ್ಲದೆ, ಕೆಲವು ಪ್ರತಿಷ್ಠಿತ ಏರಿಯಾಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ […]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಮಾದಕವಸ್ತುಗಳ ಹಾವಳಿ ಹೆಚ್ಚಾಗ್ತಿದೆ. ರಾಜ್ಯದಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಕಿರದ್ ಮಿಶಾಲ್(35) ಬಂಧಿತ ಆರೋಪಿ.
ಆರೋಪಿ ಮಿಶಾಲ್ ರೈಲಿನಲ್ಲಿ ಲಗ್ಗೇಜ್ ಟ್ರಾವೆಲ್ ಬ್ಯಾಗ್ ಮುಖಾಂತರ ಕೆಜಿ ಗಟ್ಟಲೆ ಗಾಂಜಾ ತರುತ್ತಿದ್ದ. ನಿರಂತರವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗು ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಅಲ್ಲದೆ, ಕೆಲವು ಪ್ರತಿಷ್ಠಿತ ಏರಿಯಾಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾರತ್ ಹಳ್ಳಿ ಪೊಲೀಸರು, ಆರೋಪಿಯನ್ನು ಬಂಧಿಸಿ 5 ಲಕ್ಷ ಮೌಲ್ಯದ 15 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.