ಬಂಡಿಕಾಳಮ್ಮ ದೇವಸ್ಥಾನದ ಬಳಿ.. ಗಾಂಜಾ ಮಾರುತ್ತಿದ್ದ ಐನಾತಿಗಳು ಅಂದರ್​

ನಗರದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರ ಬಂಧನವಾಗಿದೆ. ಕೆಂಪೇಗೌಡ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರನ್ನು ವೆರಿಕಲ ವೆಂಕಟರಮಣ ಹಾಗೂ ಮುನೀರ್ ಖಾನ್ ಎಂದು ಗುರುತಿಸಲಾಗಿದೆ.

ಬಂಡಿಕಾಳಮ್ಮ ದೇವಸ್ಥಾನದ ಬಳಿ.. ಗಾಂಜಾ ಮಾರುತ್ತಿದ್ದ ಐನಾತಿಗಳು ಅಂದರ್​
ಬಂಡಿಕಾಳಮ್ಮ ದೇವಸ್ಥಾನದ ಬಳಿ.. ಗಾಂಜಾ ಮಾರುತ್ತಿದ್ದ ಐನಾತಿಗಳು ಅಂದರ್​

Updated on: Dec 25, 2020 | 1:24 PM

ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರ ಬಂಧನವಾಗಿದೆ. ಕೆಂಪೇಗೌಡ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರನ್ನು ವೆರಿಕಲ ವೆಂಕಟರಮಣ ಹಾಗೂ ಮುನೀರ್ ಖಾನ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಹೊರರಾಜ್ಯದಿಂದ ಅಕ್ರಮವಾಗಿ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ವೆಂಕಟರಮಣ ಮತ್ತು ಮುನೀರ್​ ಬಂಡಿಕಾಳಮ್ಮ ದೇವಸ್ಥಾನದ ಬಳಿ ಗಾಂಜಾ ಮಾರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಸದ್ಯ, ಬಂಧಿತರಿಂದ 104 ಕೆ.ಜಿ 300 ಗ್ರಾಂ ಗಾಂಜಾ ಹಾಗೂ ಒಂದು ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ವಂಚನೆ ಆರೋಪ: ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್​ ದಾಖಲು