ಹೊಸ ಕರೆನ್ಸಿ ನೀಡಿ ₹64 ಲಕ್ಷ ಮೌಲ್ಯದ ₹500 ಮತ್ತು ₹1000 ಮುಖಬೆಲೆಯ ಹಳೇ ನೋಟುಗಳನ್ನು ಪಡೆದಿದ್ದ ಇಬ್ಬರು ವ್ಯಕ್ತಿಗಳ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: Jul 07, 2022 | 7:13 PM

ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ ₹14 ಲಕ್ಷ ಕೊಟ್ಟು ಇವರು ₹64 ಲಕ್ಷ ಮೌಲ್ಯದ ಹಳೇ ನೋಟುಗಳನ್ನು ಪಡೆದಿದ್ದಾರೆ. ಈ ವ್ಯಕ್ತಿಗಳ ಕೈಯಲ್ಲಿ ಹೇಗೆ ಹಳೇ ನೋಟುಗಳು ಬಂತು ಎಂಬುದರ ಬಗ್ಗೆ ದೆಹಲಿ ಪೊಲೀಸರು...

ಹೊಸ ಕರೆನ್ಸಿ ನೀಡಿ ₹64 ಲಕ್ಷ ಮೌಲ್ಯದ ₹500 ಮತ್ತು ₹1000 ಮುಖಬೆಲೆಯ ಹಳೇ ನೋಟುಗಳನ್ನು ಪಡೆದಿದ್ದ ಇಬ್ಬರು ವ್ಯಕ್ತಿಗಳ ಬಂಧನ
ಬಂಧಿತ ಆರೋಪಿಗಳು
Follow us on

ನೋಟು ಅಮಾನ್ಯೀಕರಣದ (demonetisation) ವೇಳೆ ರದ್ದು ಮಾಡಲಾಗಿದ್ದ ₹500 ಮತ್ತು ₹1000 ಮುಖಬೆಲೆಯ ಹಳೇ ನೋಟುಗಳನ್ನು ಕೈವಶವಿರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಪೂರ್ವ ದೆಹಲಿಯ (Delhi) ಲಕ್ಷ್ಮಿ ನಗರದಿಂದ ಬಂಧಿಸಲಾಗಿದೆ. ಇವರ ಬಳಿಯಿಂದ ₹62 ಲಕ್ಷ ಮೌಲ್ಯದ ಹಳೇ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ ₹14 ಲಕ್ಷ ಕೊಟ್ಟು ಇವರು ₹64 ಲಕ್ಷ ಮೌಲ್ಯದ ಹಳೇ ನೋಟುಗಳನ್ನು ಪಡೆದಿದ್ದಾರೆ. ಈ ವ್ಯಕ್ತಿಗಳ ಕೈಯಲ್ಲಿ ಹೇಗೆ ಹಳೇ ನೋಟುಗಳು ಬಂತು ಎಂಬುದರ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2016 ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಾಗಿ ಘೋಷಿಸಿದರು. ಈ ಘೋಷಣೆ ನಂತರ ಕೇಂದ್ರ ಸರ್ಕಾರವು ಹಳೇ ₹500 ನೋಟುಗಳ ಬದಲಿಗೆ ಹೊಸ ನೋಟು ಚಲಾವಣೆಗೆ ತಂದರೂ 1000 ಮುಖಬೆಲೆಯ ನೋಟನ್ನು ರದ್ದು ಮಾಡಿತ್ತು. ಇದರ ಬದಲಿಗೆ ಹೊಸ ₹2000 ನೋಟನ್ನು ಚಲಾವಣೆಗೆ ತಂದಿತ್ತು. ಹಳೇ ನೋಟುಗಳನ್ನು ಬದಲಿಸಲು ಸರ್ಕಾರ ದೇಶದ ಜನರಿಗೆ 2017 ಮಾರ್ಚ್ ವರೆಗೆ ಕಾಲಾವಕಾಶವನ್ನೂ ನೀಡಿತ್ತು. 2018ರಲ್ಲಿ ಆರ್​​ಬಿಐ ₹10, ₹50 ಮತ್ತು ₹200 ಹೊಸ ನೋಟನ್ನು ಚಲಾವಣೆಗೆ ತಂದಿತ್ತು. ಅದೇ ವೇಳೆ ಲ್ಯಾವೆಂಡರ್ ಬಣ್ಣದ ಹೊಸ 100ರ ನೋಟನ್ನೂ ಚಲಾವಣೆಗೆ ತಂದಿತ್ತು.


ನೋಟು ಅಮಾನ್ಯೀಕರಣದಿಂದಾಗಿ ಶೇ 86ರಷ್ಟು ಕರೆನ್ಸಿ ಚಲಾವಣೆಗೆ ಹೊಡೆತ ಬಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕರೆನ್ಸಿ ಕೊರತೆಯೂ ಕಂಡು ಬಂತು. ಆದಾಗ್ಯೂ ನೋಟು ಅಮಾನ್ಯೀಕರಣ ನಡೆಯಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಹಾರವು ಹೆಚ್ಚಾಯಿತು.