ರಾತ್ರೋರಾತ್ರಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಆರೋಪಿ

ಈತ ರಮಾದೇವಿಯನ್ನು ಮದುವೆಯಾಗದೆ ಸಂಸಾರ ನಡೆಸುತ್ತಿದ್ದ. 5 ತಿಂಗಳ ಮಗುವೂ ಇತ್ತು. ಮಗಳನ್ನು ಮದುವೆಯಾಗುವಂತೆ ತಾಯಿ ಲಕ್ಷ್ಮೀದೇವಿ ಒತ್ತಾಯ ಮಾಡುತ್ತಲೇ ಇದ್ದರು.

ರಾತ್ರೋರಾತ್ರಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಆರೋಪಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Jan 10, 2021 | 11:12 AM

ದೇವನಹಳ್ಳಿ: ಒಡಿಶಾ ಮೂಲದ ವ್ಯಕ್ತಿಯೊಬ್ಬ ತಾಯಿ-ಮಗಳನ್ನು ಹತ್ಯೆ ಮಾಡಿ, ಪೊಲೀಸ್​ ಠಾಣೆಗೆ ಹೋಗಿ ಶರಣಾದ ಘಟನೆ ಇಲ್ಲಿನ ಬೈಚಾಪುರದಲ್ಲಿ ನಡೆದಿದೆ. ಲಕ್ಷ್ಮೀದೇವಿ(50), ರಮಾದೇವಿ (30) ಕೊಲೆಯಾದವರಾಗಿದ್ದು, ಮಲಯಫರೀದ್‌ ಆರೋಪಿ.

ಈತ ರಮಾದೇವಿಯನ್ನು ಮದುವೆಯಾಗದೆ ಸಂಸಾರ ನಡೆಸುತ್ತಿದ್ದ. 5 ತಿಂಗಳ ಮಗುವೂ ಇತ್ತು. ಮಗಳನ್ನು ಮದುವೆಯಾಗುವಂತೆ ತಾಯಿ ಲಕ್ಷ್ಮೀದೇವಿ ಒತ್ತಾಯ ಮಾಡುತ್ತಲೇ ಇದ್ದರು. ಆದರೆ ಈ ವ್ಯಕ್ತಿ ಮಧ್ಯರಾತ್ರಿ ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪುಟ್ಟ ಮಗುವಿನ ಸಮೇತ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್

Published On - 11:12 am, Sun, 10 January 21