ಮಲ್ಲೇಶ್ವರಂನಲ್ಲೂ ಡ್ರಗ್ಸ್ ಹಾವಳಿ? ಇಬ್ಬರು ಯುವಕರ ಸಾವು

|

Updated on: Nov 20, 2019 | 6:09 AM

ಬೆಂಗಳೂರು: ಒಂದೇ ಏರಿಯಾದಲ್ಲಿ‌ ಇಬ್ಬರು ಯುವಕರ ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಲ್ಲೇಶ್ವರಂ 13ನೇ ಕ್ರಾಸ್​ನ ಅಭಿಲಾಶ್ ಮತ್ತು ಗೋಪಿ ಮೃತ ಯುವಕರಾಗಿದ್ದಾರೆ. ಹೊಟ್ಟೆ ನೋವೆಂದು ಅಭಿಲಾಷ್ ಮಾತ್ರೆ ಸೇವಿಸಿದ್ದ. ಹೊಟ್ಟೆ ನೋವು ಹೆಚ್ಚಾದ ಕಾರಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅಭಿಲಾಷ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಇನ್ನು ಗೋಪಿ ಎಂಬಾತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈತನೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರತ್ಯೇಕ ಆಸ್ಪತ್ರೆಗೆ ದಾಖಲಾಗಿದ್ದ ಒಂದೇ ಏರಿಯಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಡ್ರಗ್ಸ್ […]

ಮಲ್ಲೇಶ್ವರಂನಲ್ಲೂ ಡ್ರಗ್ಸ್ ಹಾವಳಿ? ಇಬ್ಬರು ಯುವಕರ ಸಾವು
Follow us on

ಬೆಂಗಳೂರು: ಒಂದೇ ಏರಿಯಾದಲ್ಲಿ‌ ಇಬ್ಬರು ಯುವಕರ ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಲ್ಲೇಶ್ವರಂ 13ನೇ ಕ್ರಾಸ್​ನ ಅಭಿಲಾಶ್ ಮತ್ತು ಗೋಪಿ ಮೃತ ಯುವಕರಾಗಿದ್ದಾರೆ.

ಹೊಟ್ಟೆ ನೋವೆಂದು ಅಭಿಲಾಷ್ ಮಾತ್ರೆ ಸೇವಿಸಿದ್ದ. ಹೊಟ್ಟೆ ನೋವು ಹೆಚ್ಚಾದ ಕಾರಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅಭಿಲಾಷ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಇನ್ನು ಗೋಪಿ ಎಂಬಾತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈತನೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಪ್ರತ್ಯೇಕ ಆಸ್ಪತ್ರೆಗೆ ದಾಖಲಾಗಿದ್ದ ಒಂದೇ ಏರಿಯಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಿದ ಕಾರಣ ಈ ಯುವಕರು ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

Published On - 11:15 pm, Tue, 19 November 19