ಕುಖ್ಯಾತ ಭೂಗತ ದೊರೆ ರವಿ ಪೂಜಾರಿಯ ಸಹಚರ ಇಖ್ಲಾಕ್ ಖುರೇಶಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2007ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಖುರೇಶಿಯನ್ನು ಕಳೆದ ರಾತ್ರಿ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.
ಸಿ ಸಿ ಬಿ ಮೂಲಗಳ ಪ್ರಕಾರ, ರವಿ ಪೂಜಾರಿ ಅಣತಿಯ ಮೇರೆಗೆ ನಡೆದ ಬೆಂಗಳೂರಿನ ಶಬ್ನಮ್ ಡೆವಲಪರ್ ಶೂಟ್ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖುರೇಶಿ ಪೊಲೀಸರಿಗೆ ಬೇಕಾಗಿದ್ದ. ಕೊಲೆಗೆ ಬಳಸಿದ ಆಯುಧವನ್ನು ಖುರೇಶಿಯೇ ಸರಬರಾಜು ಮಾಡಿದ್ದನೆನ್ನಲಾಗಿದೆ.
ಉತ್ತರ ಪ್ರದೇಶ ಮೂಲದ ಖುರೇಶಿಯನ್ನು ಪೊಲೀಸರು 2007ರಲ್ಲೇ ಬಂಧಿಸಿದ್ದರೂ ಅವನು ಜಾಮೀನು ಪಡೆದು ನಗರದಿಂದ ಕಣ್ಮರೆಯಾಗಿದ್ದ. ಅವನನ್ನುಈಗ ಸೆರೆಹಿಡಿದು ಬೆಂಗಳೂರಿಗೆ ಕರೆತಂದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.