Drilling ಮೆಷಿನ್ ಕೈಕೊಟ್ಟಿದ್ದಕ್ಕೆ ತಪ್ಪಿತು ಭರ್ಜರಿ ಚಿನ್ನದ ಲೂಟಿ, ಎಲ್ಲಿ?

ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದ್ದಕ್ಕೆ ರಾಬರಿ ಸ್ಕೆಚ್ ತಪ್ಪಿರುವ ಸ್ವಾರಸ್ಯಕರ ಪ್ರಸಂಗ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ನಡೆದಿದೆ. ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಣಪ್ಪುರಂ ಗೋಲ್ಡ್ ಲೋನ್​ ಅಂಗಡಿಯನ್ನ ಲೋಟಿ ಮಾಡಲು ಪ್ಲಾನ್​ ಮಾಡಿದ್ದ ಕಳ್ಳರು ಅದೇ ಬಿಲ್ಡಿಂಗ್ ಮೇಲ್ಭಾಗದ ಮತ್ತೊಂದು ಶಾಪ್​ನಿಂದ ಒಳನುಗ್ಗಲು ಸ್ಕೆಚ್ ಹಾಕಿದ್ದರು. ಅದರಂತೆ, ಮೇಲ್ಭಾಗದ ಅಂಗಡಿಯ ಕಾಂಕ್ರಿಟ್​ ನೆಲವನ್ನ ಕೊರೆಯುವ ಪ್ಲಾನ್​ ಮಾಡಿದ್ದರು. ಅಂತೆಯೇ, ಆಗಸ್ಟ್ 2 ರ ರಾತ್ರಿ ಬೈಕ್​ನಲ್ಲಿ […]

Drilling ಮೆಷಿನ್ ಕೈಕೊಟ್ಟಿದ್ದಕ್ಕೆ ತಪ್ಪಿತು ಭರ್ಜರಿ ಚಿನ್ನದ ಲೂಟಿ, ಎಲ್ಲಿ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 06, 2020 | 3:47 PM

ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದ್ದಕ್ಕೆ ರಾಬರಿ ಸ್ಕೆಚ್ ತಪ್ಪಿರುವ ಸ್ವಾರಸ್ಯಕರ ಪ್ರಸಂಗ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ನಡೆದಿದೆ. ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.

ಮಣಪ್ಪುರಂ ಗೋಲ್ಡ್ ಲೋನ್​ ಅಂಗಡಿಯನ್ನ ಲೋಟಿ ಮಾಡಲು ಪ್ಲಾನ್​ ಮಾಡಿದ್ದ ಕಳ್ಳರು ಅದೇ ಬಿಲ್ಡಿಂಗ್ ಮೇಲ್ಭಾಗದ ಮತ್ತೊಂದು ಶಾಪ್​ನಿಂದ ಒಳನುಗ್ಗಲು ಸ್ಕೆಚ್ ಹಾಕಿದ್ದರು. ಅದರಂತೆ, ಮೇಲ್ಭಾಗದ ಅಂಗಡಿಯ ಕಾಂಕ್ರಿಟ್​ ನೆಲವನ್ನ ಕೊರೆಯುವ ಪ್ಲಾನ್​ ಮಾಡಿದ್ದರು.

ಅಂತೆಯೇ, ಆಗಸ್ಟ್ 2 ರ ರಾತ್ರಿ ಬೈಕ್​ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಅಂಗಡಿಯ ಸ್ಟ್ರಾಂಗ್ ರೂಮ್​ನ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮೆಷಿನ್​ ಬಳಸಿ ಕೊರೆಯೋಕೆ ಮುಂದಾದರು. ಆದರೆ, ಮೆಷೀನ್​ನ ಬಿಟ್​ ಸಿಲುಕಿಕೊಂಡು ಇದು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಖದೀಮರಿಗೆ ಇದನ್ನ ಬಿಡಿಸಲು ಆಗಲಿಲ್ಲ

ಹಾಗಾಗಿ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದು ಕಂಪ್ಯೂಟರ್ ಶಾಪ್ ಆಗಿದ್ದ ಮೇಲಿನ ಅಂಗಡಿಯಲ್ಲಿದ್ದ ಎರಡು ಸಾವಿರ ರೂಪಾಯಿ ನಗದು, ಸಿಸಿ ಕ್ಯಾಮಾರಾ ಹಾಗೂ ಡಿವಿಆರ್ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಖಾಗಿ ಬಲೆ ಬೀಸಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್