ಉತ್ತರ ಪ್ರದೇಶ: ಮಗನ ಕತ್ತು ಸೀಳಿ, ಸ್ಟವ್ ಮೇಲೆ ದೇಹವನ್ನು ಸುಡಲು ಯತ್ನಿಸಿದ್ದ ಮಹಿಳೆಯ ಬಂಧನ

ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗುವಿನ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಸ್ಟವ್​ ಮೇಲೆ ದೇಹವನ್ನು ಸುಡಲು ಯತ್ನಿಸಿದ ಹಿನ್ನೆಯಲ್ಲಿ ಬಂಧಿಸಲಾಗಿದೆ. ದೇವಿ ಅವರ ಪತಿ ಕಪಿಲ್ ಕುಮಾರ್ ಅವರು ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗ ಸತ್ತಿರುವುದನ್ನು ಕಂಡಾಗ ನಿಜಾಂಶ ತಿಳಿದುಬಂದಿದೆ. ಆಘಾತಕ್ಕೊಳಗಾದ ಕುಮಾರ್ ತಕ್ಷಣ ಕುಟುಂಬ ಸದಸ್ಯರನ್ನು ಸಹಾಯಕ್ಕಾಗಿ ಕೂಗಿ ಕರೆದಿದ್ದಾರೆ.

ಉತ್ತರ ಪ್ರದೇಶ: ಮಗನ ಕತ್ತು ಸೀಳಿ, ಸ್ಟವ್ ಮೇಲೆ ದೇಹವನ್ನು ಸುಡಲು ಯತ್ನಿಸಿದ್ದ ಮಹಿಳೆಯ ಬಂಧನ
ಪೊಲೀಸ್​
Image Credit source: India Today

Updated on: Jun 13, 2024 | 8:02 AM

ಮಗನ ಕತ್ತು ಸೀಳಿ, ಸ್ಟವ್​ ಮೇಲೆ ದೇಹವನ್ನು ಸುಡಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ. ಮಹಿಳೆ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ್ದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಳು ಎಂಬುದು ತಿಳಿದುಬಂದಿದೆ, ಮೊದಲು ಮಗುವಿನ ಕತ್ತು ಸೀಳಿ ನಂತರ ಶವವನ್ನು ಮನೆಗೊಳಗಿನ ಒಲೆಯ ಮೇಲೆ ಸುಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ದೇವಿ ಅವರ ಪತಿ ಕಪಿಲ್ ಕುಮಾರ್ ಅವರು ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಮ್ಮ ಮಗ ಸತ್ತಿರುವುದನ್ನು ಕಂಡಾಗ ನಿಜಾಂಶ ತಿಳಿದುಬಂದಿದೆ. ಆಘಾತಕ್ಕೊಳಗಾದ ಕುಮಾರ್ ತಕ್ಷಣ ಕುಟುಂಬ ಸದಸ್ಯರನ್ನು ಸಹಾಯಕ್ಕಾಗಿ ಕರೆದರು. ಕುಟುಂಬ ಸದಸ್ಯರು ಬಂದಾಗ, ದೇವಿ, ಸಲಿಕೆ ಹಿಡಿದು ಅವರನ್ನು ಮತ್ತು ಕುಮಾರ್ ಅವರನ್ನು ಮನೆಯಿಂದ ಓಡಿಸಿದರು.

ಈ ಭೀಕರ ಘಟನೆಯ ಬಗ್ಗೆ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಮ್ ಅರ್ಜ್ ಮತ್ತು ಸರ್ಕಲ್ ಆಫೀಸರ್ ಚಂದ್‌ಪುರ ಭರತ್ ಸೋಂಕರ್ ಆಗಮಿಸಿದರು. ಅವರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಕುಮಾರ್ ಅವರ ದೂರಿನ ಆಧಾರದ ಮೇಲೆ ದೇವಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿದ ತಂದೆ

ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದರೂ ದೇವಿ ಮೌನವಾಗಿದ್ದರು. ಏತನ್ಮಧ್ಯೆ, ಆಕೆಯ ಸಹೋದರ ಆಕೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ತನ್ನ ಮೂರು ವರ್ಷದ ಮಗಳನ್ನು ಕೊಂದು ಶವದೊಂದಿಗೆ 4 ಕಿಲೋಮೀಟರ್ ರಸ್ತೆಯಲ್ಲಿ ಸುತ್ತಾಡಿದ್ದ ಘಟನೆ ನಡೆದಿತ್ತು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ