ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಅಪರಾಧ ಮರೆಮಾಚಲು ಚಿತ್ರಹಿಂಸೆ

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಸ್ನೇಹಿತನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಆದರೆ ಈ ವಿಚಾರ ಹೊರಗೆ ಬರಬಾರದೆಂದು ತಾಯಿ ತನ್ನ 10 ವರ್ಷದ ಮಗಳಿಗೆ ಚಿತ್ರಹಿಂಸೆ ನೀಡಿ, ಮತ್ತೆ ಆತನ ಬಳಿಯೇ ಕಳುಹಿಸಿಕೊಡಲು ಯತ್ನಿಸಿದ್ದಾಳೆ ಮತ್ತು ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಪ್ರಯತ್ನಿಸಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಾಯಿಯ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಅಪರಾಧ ಮರೆಮಾಚಲು ಚಿತ್ರಹಿಂಸೆ
ಅಪರಾಧ
Image Credit source: India Today

Updated on: Apr 12, 2024 | 10:22 AM

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಸ್ನೇಹಿತನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಆದರೆ ಈ ವಿಚಾರ ಹೊರಗೆ ಬರಬಾರದೆಂದು ತಾಯಿ ತನ್ನ 10 ವರ್ಷದ ಮಗಳಿಗೆ ಚಿತ್ರಹಿಂಸೆ ನೀಡಿ, ಮತ್ತೆ ಆತನ ಬಳಿಯೇ ಕಳುಹಿಸಿಕೊಡಲು ಯತ್ನಿಸಿದ್ದಾಳೆ ಮತ್ತು ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಪ್ರಯತ್ನಿಸಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಿಚಾರವು ಎಲ್ಲಿಯೂ ಹೊರಬರಬಾರದೆಂದು ತಾಯಿ ಆಕೆ ಹಾಗೂ ಆಕೆಯ ಸಹೋದರ ಇಬ್ಬರಿಗೂ ಥಳಿಸಿ ಚಿತ್ರಹಿಂಸೆ ನೀಡುತ್ತಿದ್ದರು. ಹಿಂಸೆಯನ್ನು ಸಹಿಸಲಾಗದೆ, ಮಗಳು ಜನವರಿ 20 ರಂದು ತನ್ನ ಗಾಜಿಯಾಬಾದ್ ನಿವಾಸದಿಂದ ಓಡಿಹೋಗಿದ್ದಾಳೆ ಮತ್ತು ನಂತರ ದೆಹಲಿಯ ಬೀದಿಗಳಲ್ಲಿ ಅಲೆದಾಡುತ್ತಿದ್ದಳು.

ಅದೃಷ್ಟವಶಾತ್ ಆಕೆಯನ್ನು ದೆಹಲಿ ಪೊಲೀಸರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಇರಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಸತ್ಯ ಎನ್ನುವುದು ಬಹಿರಂಗಗೊಂಡಿದೆ.
ನಾಲ್ಕು ವರ್ಷಗಳ ಹಿಂದೆ ತನ್ನ ತಂದೆಯ ನಿಧನದ ನಂತರ, ತಾನು ಮತ್ತು ಸಹೋದರ ತಮ್ಮ ತಾಯಿಯ ಅಜ್ಜಿಯೊಂದಿಗೆ ವಾಸಿಸುತ್ತಿದ್ದುದಾಗಿ ಹೇಳಿದ್ದಾಳೆ.

ಮತ್ತಷ್ಟು ಓದಿ: ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ವ್ಯಕ್ತಿ!

ಕಳೆದ ವರ್ಷ, ತಾಯಿ ಅವರನ್ನು ಕರೆದುಕೊಂಡು ಬಂದಿದ್ದಳು, ಬಳಿಕ ದೌರ್ಜನ್ಯಕ್ಕೆ ಬಲಿಯಾಗಬೇಕಾಯಿತು, ಸಹೋದರನೂ ಕೂಡ ಓಡಿಹೋಗಿರುವುದಾಗಿ ತಿಳಿಸಿದ್ದಾಳೆ. ತಂದೆಯ ಮರಣದ ನಂತರ ತಾಯಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಗೊತ್ತಾದ ನಂತರ ಮನೆ ತೊರೆಯದಿದ್ದರೆ ದೊಡ್ಡವನಾದ ಮೇಲೆ ತನ್ನನ್ನೂ ಈ ದಂಧೆಗೆ ತಳ್ಳುತ್ತಿದ್ದಳು ಎಂದು ಹೇಳಿದ್ದಾಳೆ.

ಜನವರಿ 20ರಂದು ಮಗಳು ಕಾಣೆಯಾದ ಬಳಿಕ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿರಲಿಲ್ಲ. ತನ್ನ ತಾಯಿ ಮತ್ತು ರಾಜು ಅಪರಾಧವನ್ನು ಮುಚ್ಚಿಡಲು ತನಗೆ ಚಿತ್ರಹಿಂಸೆ ನೀಡುತ್ತಿದ್ದರು ಮತ್ತು ಈ ಬಗ್ಗೆ ಯಾರಿಗೂ ಹೇಳದಂತೆ ನೋಡಿಕೊಳ್ಳಲು ಬೆದರಿಕೆ ಹಾಕುತ್ತಿದ್ದರು ಎಂದು ಬಾಲಕಿ ತಿಳಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us