ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಬಳಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ (Murder Case) ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ವಿನಯ್ ಭಟ್, ಶ್ರೀಧರ್ ಭಟ್ ಎಂಬವರನ್ನು ಶಿವಮೊಗ್ಗದಲ್ಲಿ ಪತ್ತೆಹಚ್ಚಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ನಾಲ್ವಾರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಭೇದಿಸಲು ಭಟ್ಕಳ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿತ್ತು.
ಓಣಿಬಾಗಿಲು ಗ್ರಾಮದಲ್ಲಿ ಫೆ.24ರಂದು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕುಟುಂಬದ ಹಿರಿಯ ಶಂಭು ಭಟ್ (65) ಶಂಭು ಭಟ್ ಪತ್ನಿ ಮಾದೇವಿ ಭಟ್ (40) ಮಗ ರಾಜೀವ್ ಭಟ್ (34) ಸೊಸೆ ಕುಸುಮಾ ಭಟ್ (30) ಎಂಬವನ್ನು ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ಕುಸುಮಾ ದಂಪತಿಯ ಮಗು ಬಚಾವ್ ಆಗಿದೆ.
ಶಂಭು ಭಟ್ ಅವರ ಮೊದಲ ಮಗ ಶ್ರೀಧರ್ ಭಟ್ ಜೊತೆ ವಿದ್ಯಾ ಭಟ್ ವಿವಾಹವಾಗಿತ್ತು. ಆದರೆ ಕಿಡ್ನಿ ವೈಫಲ್ಯದಿಂದ ಜ್ವರ ಬಂದು ಶ್ರೀಧರ್ ಭಟ್ ಮೂರ್ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಈ ಮಧ್ಯೆ ಜೀವನಾಂಶ ನೀಡುವಂತೆ ಸೊಸೆ ವಿದ್ಯಾ ಭಟ್ ಬೇಡಿಕೆ ಇಟ್ಟಿದ್ದರು. ಆಸ್ತಿ ವಿಚಾರವಾಗಿ ಗಂಡನ ಕುಟುಂಬದ ಜೊತೆ ವಿದ್ಯಾ ಭಟ್ ಗಲಾಟೆ ಮಾಡಿದ್ದರು ಎನ್ನಲಾಗುತ್ತಿದೆ. ಗಂಡನ ಮನೆಯವರು 6 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ 1 ಎಕರೆ 9 ಗುಂಟೆ ಭೂಮಿ ನೀಡಿದ್ದರು. ಆದರೆ ಸೊಸೆ ವಿದ್ಯಾ 3 ಎಕರೆ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಜಗಳ ನಡೆದಿತ್ತು. ಈ ಹಿನ್ನಲೆ ಸೊಸೆ ವಿದ್ಯಾ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಸಂಭಂಧ ಆಡಿಯೋವೊಂದು ಟಿವಿ9ಗೆ ಲಭ್ಯವಾಗಿದೆ. ಆಡಿಯೋ ಪ್ರಕಾರ, ಮೃತ ಶ್ರೀಧರ ಭಟ್ನ ಪತ್ನಿ ವಿದ್ಯಾಭಟ್ಗೆ ಜೀವನಾಂಶ ಕೊಡುವ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ವ್ಯಕ್ತವಾಗಿದೆ. ಜೀವನಾಂಶವಾಗಿ ವಿದ್ಯಾ ಭಟ್ಗೆ ಜಮೀನು ನೀಡಿ ಎಂದು ಗಂಡನ ಮನೆಯವರಿಗೆ, ವಿದ್ಯಾ ಪರ ವಕಾಲತ್ತು ವಹಸಿಕೊಂಡು ಇಬ್ಬರು ಅಪರಿಚಿತರು ಬಂದಿದ್ದಾರೆ. ವಕಾಲತ್ತು ವಹಿಸಿಕೊಂಡು ಬಂದವರು, ವಿದ್ಯಾ ಭಟ್ ಮತ್ತು ಆಕೆಯ ಎರಡು ಮಕ್ಕಳು, ಜೀವನ ನಡೆಸಲು ಜಮೀನು ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 pm, Sun, 26 February 23