Murders for property in Karwar: ಆಸ್ತಿಗಾಗಿ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ರಾಕ್ಷಸರ ಕ್ರೌರ್ಯ ತಾಲಿಬಾನಿಗಳಿಗಿಂತ ಮಿಗಿಲಾದದ್ದು!
ಶ್ರೀಧರ್ ಹೆಗಡೆ ಕ್ಯಾನ್ಸರ್ ಗೆ ಬಲಿಯಾದ ಬಳಿಕ ಅವರ ಹೆಂಡತಿ ಅಂದರೆ ಶಂಭು ಹೆಗಡೆ ಅವರ ಸೊಸೆ ಮತ್ತು ಆಕೆಯ ಮನೆಯವರು ಆಸ್ತಿಗಾಗಿ ಪೀಡಿಸಿ ಅದು ಸಿಗದೆ ಹೋದಾಗ ನಾಲ್ವರನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ
ಕಾರವಾರ: ತಾಲಿಬಾನಿಗಳಲ್ಲೂ ಇಂಥ ಕ್ರೌರ್ಯ ಇರಲಿಕ್ಕಿಲ್ಲ ಮಾರಾಯ್ರೇ. ಕೇವಲ ಒಂದು ಚೂರು ಆಸ್ತಿಗಾಗಿ ಮನೆಯ ಹಿರಿಯರಾದ ಶಂಭು ಹೆಗಡೆ 71 (Shambhu Hegde) ಅವರ ಪತ್ನಿ ಮಾದೇವಿ ಹೆಗಡೆ 60 (Madevi Hegde), ಇವರಿಬ್ಬರ ಮಗ ರಾಜೀವ್ ಹೆಗಡೆ 34 ಮತ್ತು ಅವರ ಪತ್ನಿ ಕುಸುಮಾ (Kusuma) ಅವರನ್ನು ಕಟುಕರ ಹಾಗೆ ನಿರ್ದರ್ಯತೆಯಿಂದ ಕೊಚ್ಚಿಹಾಕಲಾಗಿದೆ. ಜಿಲ್ಲೆಯ ಕಾಡುವಳ್ಳ ಓಣಿಬಾಗಿಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಕೊಲೆಗಳು ನಡೆದಿದ್ದು, ರಾಜೀವ್ ಮತ್ತು ಕುಸುಮಾ ಅವರ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರಿಂದ ಬಚಾವಾಗಿದ್ದಾರೆ. ರಾಜೀವ್ ಅವರ ಸಹೋದರ ಶ್ರೀಧರ್ ಹೆಗಡೆ ಕ್ಯಾನ್ಸರ್ ಗೆ ಬಲಿಯಾದ ಬಳಿಕ ಅವರ ಹೆಂಡತಿ ಅಂದರೆ ಶಂಭು ಹೆಗಡೆ ಅವರ ಸೊಸೆ ಮತ್ತು ಆಕೆಯ ಮನೆಯವರು ಆಸ್ತಿಗಾಗಿ ಪೀಡಿಸಿ ಅದು ಸಿಗದೆ ಹೋದಾಗ ನಾಲ್ವರನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಶಂಭು ಹೆಗಡೆ ಅವರ ಅಳಿಯ ಹೇಳುವುದನ್ನು ಕೇಳಿಸಿಕೊಳ್ಳಿ. ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ 3 ತಂಡಗಳನ್ನು ರಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ