AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yediyurappa @ 80: ಬಿಎಸ್ ಯಡಿಯೂರಪ್ಪನವರ ಸಾರ್ಥಕ ರಾಜಕೀಯ ಬದುಕು-ಫೋಟೋಗಳ ಮೂಲಕ

Yediyurappa @ 80: ಬಿಎಸ್ ಯಡಿಯೂರಪ್ಪನವರ ಸಾರ್ಥಕ ರಾಜಕೀಯ ಬದುಕು-ಫೋಟೋಗಳ ಮೂಲಕ

ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Feb 27, 2023 | 8:19 AM

Share

ಛಲ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಛಲ ಎಂಬದು ರಾಜ್ಯದ ಬಹಳಷ್ಟು ಜನರಿಗೆ ಗೊತ್ತಿದೆ. ಯಡಿಯೂರಪ್ಪನವರಿಗಿಂದ 80ನೇ ಹುಟ್ಟುಹಬ್ಬದ ಸಂಭ್ರಮ. ಯಡಿಯೂರಪ್ಪನವರು ಬೇರೆ ಬೇರೆ ನಾಯಕರೊಂದಿಗೆ ವಿಭಿನ್ನ ಮೂಡ್ ಗಳಲ್ಲಿ ನೋಡಬಹುದು. ಇನ್ನು ಮುಂದೆ ಅವರು ಪಕ್ಷದ ಸಂಘಟನೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಬೆಂಗಳೂರು: ಇಡೀ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದ ಅಗ್ರಗಣ್ಯ ನಾಯಕ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗಿಂದು ಹುಟ್ಟುಹಬ್ಬದ ಸಂಭ್ರಮ. 80ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಮುತ್ಸದ್ದಿ (statesman) ಮತ್ತು ಕರ್ನಾಟಕದಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲು ನಾಲ್ಕು ದಶಕಗಳಿಂದ ಹಗಲಿರುಳು ಶ್ರಮಿಸಿದ ಮತ್ತು ದಾಖಲೆಯ 4 ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರು (BS Yediyurappa) ನಿನ್ನೆ ವಿಧಾನಸಭೆಯಲ್ಲಿ ಚುನಾವಣಾ ರಾಜಕೀಯಕ್ಕೆ (electoral politics) ವಿದಾಯ ಹೇಳಿದರು. 1983ರಲ್ಲಿ ಮೊದಲಬಾರಿಗೆ ಶಾಸಕನಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ ಯಡಿಯೂರಪ್ಪ ಹಲವಾರು ಸಾಮರ್ಥ್ಯಗಳಲ್ಲಿ ರಾಜ್ಯಕ್ಕೆ ಮತ್ತು ಬಿಜೆಪಿಗೆ ಸೇವೆ ಸಲ್ಲಿಸಿದರು. ಅವರ ಸಾರ್ಥಕ ರಾಜಕೀಯ ಬದುಕನ್ನು ನೆನಪಿಸುವ ಪೋಟೋ ಫೀಚರ್ ನಿಮಗಿಲ್ಲಿ ನೀಡುತ್ತಿದ್ದೇವೆ, ಯಡಿಯೂರಪ್ಪನವರು ಬೇರೆ ಬೇರೆ ನಾಯಕರೊಂದಿಗೆ ವಿಭಿನ್ನ ಮೂಡ್ ಗಳಲ್ಲಿ ನೋಡಬಹುದು. ಇನ್ನು ಮುಂದೆ ಅವರು ಪಕ್ಷದ ಸಂಘಟನೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 25, 2023 11:19 AM