ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಡಿದೆ ಎಂಬ ಪ್ರಕರಣ ಸಂಬಂಧ ಎ 5 ಆರೋಪಿ ವೈಭವ್ ಜೈನ್ ಒರ್ವ ಡ್ರಗ್ ವ್ಯಸನಿಯಾಗಿದ್ದಾನೆ. ಆರೋಪಿ ಪತ್ನಿ ಪೂಜಾರಿಂದ ಈ ಬಗ್ಗೆ ಕಳೆದ ಆಗಸ್ಟ್ನಲ್ಲೆ ದೂರು ದಾಖಲಾಗಿತಂತೆ.
ಆರೋಪಿ ವೈಭವ್ ಜೈನ್ ಡ್ರಗ್ಸ್ ಸೇವಿಸಿ ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಹಾಗೂ ಹಲ್ಲೆ ಮಾಡ್ತಿದ್ರು ಎಂದು ಪತ್ನಿ ಪೂಜಾ ದೂರು ನೀಡಿದ್ದರು. ಅಲ್ಲದೆ ಪತ್ನಿ ಎರಡನೇ ಮಗುವಿನ ಡೆಲಿವರಿಗೆ ಹೈದ್ರಾಬಾದ್ಗೆ ಹೋದಾಗ ಇನ್ನೊರ್ವ ಯುವತಿ ಗೀತಿಕಾ ಬಂದಾನನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ.
ಆಕೆಯ ಜೊತೆ ಸೇರಿ ಡ್ರಗ್ಸ್ ಸೇವನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ವೈಯಾಲಿಕಾವಲ್ ಪೊಲೀಸರು ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ಆತನನ್ನು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಮಾಡಿದ ಐದು ದಿನಕ್ಕೆ ಬೇಲ್ ಪಡೆದು ವೈಭವ್ ಜೈನ್ ಹೊರ ಬಂದಿದ್ದ. ದೂರಿನಲ್ಲೆ ಡ್ರಗ್ಸ್ ವ್ಯಸನಿ ಎಂದು ವೈಭವ್ ಪತ್ನಿ ಹೇಳಿದ್ದರೂ ಸಹ ಡ್ರಗ್ಸ್ ಬಗ್ಗೆ ತನಿಖೆ ನಡೆಸದ ವೈಯಾಲಿಕಾವಲ್ ಪೊಲೀಸರು ಸುಮ್ಮನಾಗಿದ್ರು.