ಕೊರೊನಾ ಸಂಕಷ್ಟ ಕಾಲದಲ್ಲೂ ಕೈಯೊಡ್ಡಿದ ಪೊಲೀಸಪ್ಪ ಸಸ್ಪೆಂಡ್

ವಿಜಯಪುರ: ಕೊರೊನಾ ಸಂಕಷ್ಟ ಕಾಲದಲ್ಲೂ ಲೆಕ್ಕಿಸದೆ ಕೈಯೊಡ್ಡಿದ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದೂ ಒಬ್ಬ ಪೊಲೀಸಪ್ಪ ಸಸ್ಪೆಂಡ್ ಆಗಿ ಮನೆ ಸೇರಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಮಂದಿ ಹೀಗೆ ಕೈಯೊಡ್ಡಿ, ಕರ್ತವ್ಯ ನಿರ್ಲಕ್ಷಿಸಿ ಮನೆ ಸೇರಿಕೊಂಡಿದ್ದಾರೆ. ಭೀಮಾತೀರದ ಚಡಚಣ ಪೊಲೀಸ್ ಠಾಣೆಯ ವಿವಾದಿತ PSI ಮಹಾದೇವ ಯಲಿಗಾರ ಅಮಾನತಾಗಿದ್ದಾರೆ. ಇವರು ಇತ್ತೀಚೆಗಷ್ಟೇ ಚಡಚಣದಿಂದ ವಿಜಯಪುರ ಎಸ್​ಪಿ ಕಚೇರಿಗೆ ಒಒಡಿ ಮೇಲೆ ವರ್ಗಾವಣೆಯಾಗಿದ್ದರು. ಆದರೆ, ಎಸ್​ಪಿ ಕಚೇರಿಗೆ ಮಹಾದೇವ ಹಾಜರಾಗಲಿಲ್ಲ. ಚಡಚಣ ತಾಲೂಕಿನ ಜಿಗಜೇವಣಗಿ, […]

ಕೊರೊನಾ ಸಂಕಷ್ಟ ಕಾಲದಲ್ಲೂ ಕೈಯೊಡ್ಡಿದ ಪೊಲೀಸಪ್ಪ ಸಸ್ಪೆಂಡ್
Follow us
ಸಾಧು ಶ್ರೀನಾಥ್​
|

Updated on:May 13, 2020 | 5:42 PM

ವಿಜಯಪುರ: ಕೊರೊನಾ ಸಂಕಷ್ಟ ಕಾಲದಲ್ಲೂ ಲೆಕ್ಕಿಸದೆ ಕೈಯೊಡ್ಡಿದ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದೂ ಒಬ್ಬ ಪೊಲೀಸಪ್ಪ ಸಸ್ಪೆಂಡ್ ಆಗಿ ಮನೆ ಸೇರಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಮಂದಿ ಹೀಗೆ ಕೈಯೊಡ್ಡಿ, ಕರ್ತವ್ಯ ನಿರ್ಲಕ್ಷಿಸಿ ಮನೆ ಸೇರಿಕೊಂಡಿದ್ದಾರೆ.

ಭೀಮಾತೀರದ ಚಡಚಣ ಪೊಲೀಸ್ ಠಾಣೆಯ ವಿವಾದಿತ PSI ಮಹಾದೇವ ಯಲಿಗಾರ ಅಮಾನತಾಗಿದ್ದಾರೆ. ಇವರು ಇತ್ತೀಚೆಗಷ್ಟೇ ಚಡಚಣದಿಂದ ವಿಜಯಪುರ ಎಸ್​ಪಿ ಕಚೇರಿಗೆ ಒಒಡಿ ಮೇಲೆ ವರ್ಗಾವಣೆಯಾಗಿದ್ದರು. ಆದರೆ, ಎಸ್​ಪಿ ಕಚೇರಿಗೆ ಮಹಾದೇವ ಹಾಜರಾಗಲಿಲ್ಲ.

ಚಡಚಣ ತಾಲೂಕಿನ ಜಿಗಜೇವಣಗಿ, ದೇವರನಿಂಬರಗಿಯಲ್ಲಿ ಕೊರೊನಾ ವಾರಿಯರ್ಸ್ ಕೃತಜ್ಞತೆ ಸಮಾರಂಭದಲ್ಲಿ PSI ಮಹಾದೇವ ಭಾಗಿಯಾಗಿದ್ದರು. ಅಂದು ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲದೆ ಚಡಚಣ ಎಪಿಎಂಸಿ ವರ್ತಕರಿಂದ, ವ್ಯಾಪಾರಸ್ಥರಿಂದ ಬಡವರಿಗೆ ಆಹಾರ ಹಂಚುವುದಾಗಿ 50 ಸಾವಿರ ರೂಪಾಯಿ ಬಲವಂತವಾಗಿ ಹಣ, ಆಹಾರ ಕಿಟ್ ಪಡೆದ ಆರೋಪವಿತ್ತು.

ಇದರಿಂದ ಪೊಲೀಸ್ ಇಲಾಖೆಯ ಘನತೆಗೆ ಪೆಟ್ಟು ಬಿದ್ದಿತ್ತು. ಹಾಗಾಗಿ ಏ.8ರಂದು ಎಸ್​ಪಿ ಕಚೇರಿಗೆ ಒಒಡಿ ಮೇಲೆ ವರ್ಗವಣೆ ಮಾಡಲಾಗಿತ್ತು. ಆದರೆ, ವಿಜಯಪುರ ಎಸ್​ಪಿ ಕಚೇರಿಗೆ ಮಹಾದೇವ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಿ ಎಸ್​ಪಿ ಅನುಪಮ ಅಗ್ರವಾಲ್ ಆದೇಶಿಸಿದ್ದಾರೆ.

Published On - 5:25 pm, Wed, 13 May 20

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?