ತೆಲುಗು ಸಿನಿಮಾ ಶೈಲಿಯ ಮರ್ಡರ್​ ಅದು: ಮಗನ ಸಾವಿಗೆ ಕ್ಲೂ ಕೊಟ್ಟಿತು ಅಪ್ಪ ಕೊಡಿಸಿದ್ದ ಹಳೆಯ ಫೋನ್! ಬಯಲಿಗೆ ಬಿತ್ತು ಭಯಾನಕ ಸತ್ಯ, ಮುಂದೆ?

| Updated By: ಸಾಧು ಶ್ರೀನಾಥ್​

Updated on: Aug 22, 2022 | 5:49 PM

ಬೇಗಂ ತನ್ನ ಪತಿಯ ಕೊಲೆಗಾಗಿ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಇಬ್ಬರು ಯುವಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಜೂ. 23 ಗಂಡ ಅಜಂಗೆ ಮುಹೂರ್ತವಿಟ್ಟಿದ್ದಾರೆ ಆ ತ್ರಿವಳಿ ಪಾತಕಿಗಳು. ಅಂದು ಸೊಸೆ ಅಹ್ಮದುನೀಸಾ ತನ್ನ ಪತಿಗೆ ಮೊದಲು ನಿದ್ರೆ ಮಾತ್ರೆಗಳನ್ನು ಕೊಟ್ಟಿದ್ದಾಳೆ.

ತೆಲುಗು ಸಿನಿಮಾ ಶೈಲಿಯ ಮರ್ಡರ್​ ಅದು: ಮಗನ ಸಾವಿಗೆ ಕ್ಲೂ ಕೊಟ್ಟಿತು ಅಪ್ಪ ಕೊಡಿಸಿದ್ದ ಹಳೆಯ ಫೋನ್! ಬಯಲಿಗೆ ಬಿತ್ತು ಭಯಾನಕ ಸತ್ಯ, ಮುಂದೆ?
ತೆಲುಗು ಸಿನಿಮಾ ಶೈಲಿಯ ಮರ್ಡರ್​ ಅದು: ಮಗನ ಸಾವಿಗೆ ಕ್ಲೂ ಕೊಟ್ಟಿತು ಅಪ್ಪ ಕೊಡಿಸಿದ್ದ ಹಳೆಯ ಫೋನ್! ಬಯಲಿಗೆ ಬಿತ್ತು ಭಯಾನಕ ಸತ್ಯ, ಮುಂದೆ?
Follow us on

ಇದು ಹಸಿ ಹಸಿ ಸತ್ಯ… ಆದರೆ ಸತ್ಯ ಎಂಬುದು ಸದಾ ಬೆಂಕಿಯಂತೆ ನಿಗಿನಿಗಿ… ಅದು ಎಂದಿಗೇ ಆದರೂ ಹೊರ ಜಗತ್ತಿಗೆ ಗೋಚರವಾಗುವುದು ಗ್ಯಾರಂಟಿ. ಅದಕ್ಕೇ ಪತಿಯನ್ನು ಕೊಂದು ಬಹುಕಾಲ ತಲೆಮರೆಸಿಕೊಳ್ಳಲು ಆ ಮಹಿಳೆಗೆ ಸಾಧ್ಯವಾಗಲಿಲ್ಲ. ಹೌದು.. ಕಾಕಿನಾಡದಲ್ಲಿ ನಡೆದ ಪಬ್ಲಿಕ್ ಪ್ರಾಸಿಕ್ಯೂಟರ್ ಕೊಲೆ (Andhra public prosecutor murder) ಪ್ರಕರಣದ ನಿಗೂಢತೆಯನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ಒಂದೇ ಒಂದು ಸ್ಮಾರ್ಟ್ ಫೋನ್ ಡೇಟಾ… ಎಲ್ಲವನ್ನೂ ಬಟಾಬಯಲು ಮಾಡಿದೆ. ಪತ್ನಿಯೇ ನಿಜವಾದ ಆರೋಪಿ ಎಂದೂ ತೀರ್ಮಾನವಾಗಿದೆ.

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಕಾಕಿನಾಡ ಪೋಕ್ಸೊ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮೊಹಮ್ಮದ್ ಅಕ್ಬರ್ ಅಜಂ (ಆಂಧ್ರದ ಪಬ್ಲಿಕ್ ಪ್ರಾಸಿಕ್ಯೂಟರ್ ಹತ್ಯೆ) ಪ್ರಕರಣದ ನಿಗೂಢತೆ ಬಯಲಾಗಿದೆ. ಪೊಲೀಸರ ತನಿಖೆಯಿಂದ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮೊದಮೊದಲು, ಮಿತಿಮೀರಿದ ಮದ್ಯ ಸೇವನೆಯಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಆಜಂ ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಇದೀಗ ವಿವಾಹಿತ ಪತ್ನಿಯೇ ಆತನನ್ನು ಕೊಂದಿದ್ದಾಳೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಪತ್ನಿ ಅಹ್ಮದುನೀಸಾ ಬೇಗಂ ಸೇರಿದಂತೆ, ಆಕೆಗೆ ಸಹಾಯ ಮಾಡಿದ ಇತರ ಇನ್ನೂ ಇಬ್ಬರು ಆರೋಪಿಗಳನ್ನು ಕಂಬಿ ಹಿಂದೆ ಕಳುಹಿಸಲಾಗಿದೆ. ಈ ವರ್ಷ ಜೂನ್ 23 ರಂದು ಅಜಮ್ ನಿಧನರಾದರು. ಅಂದರೆ ಘಟನೆ ನಡೆದ ಈ ಎರಡು ತಿಂಗಳಲ್ಲಿ ಅವರ ಸಾವು ಸಹಜ ಎಂದು ಭಾವಿಸಲಾಗಿತ್ತು. ತ್ರಿವಳಿ ಆರೋಪಿಗಳೂ ಆಜಂ ಸಾವು ಸಹಜವೆಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಂದೇ ಅವರ ದಫನ್ ಸಹ ಶಾಸ್ತ್ರೋಕ್ತವಾಗಿ ನಡೆದಿತ್ತು. ಆದರೆ, ಆಜಂ ತಂದೆ ಹುಸೇನ್ ಅವರತ್ತ ಅನುಮಾನ ಸುಳಿದಾಡುತ್ತಲೇ ಇತ್ತು. ಹಾಗೆಂದೇ ಪೊಲೀಸರಿಗೂ ದೂರು ನೀಡಿದ್ದರು. ಕೊನೆಗೂ ಅಸಲಿ ವಿಷಯ ಬೆಳಕಿಗೆ ಬರಲು ಅದು ನೆರವಾಯಿತು. ಅದು ಸಾಮಾನ್ಯ ಸಾವು ಅಲ್ಲ; ಪೂರ್ವಯೋಜಿತ ಕೊಲೆ ಎಂದು ಪೊಲೀಸರು ಇದೀಗ ಸಾಬೀತುಪಡಿಸಲು ಸಕಲ ರೀತಿಯಲಿ ಸಜ್ಜಾಗಿದ್ದಾರೆ.

ಈ ತನಿಖೆಯಲ್ಲಿ ಸತ್ಯ ಹೊರಬರಲು ಆಜಂ ತಂದೆ ಹುಸೇನ್ ಅವರ ಸ್ಮಾರ್ಟ್ ಫೋನ್ ಕಾರಣವಾಯಿತು ಎಂಬುದು ಗಮನಾರ್ಹ. ತಂತ್ರಜ್ಞಾನದ ಹೊಡೆತಕ್ಕೆ.. ಅಜಂ ಪತ್ನಿಯ ಪಾತಕ, ಘಾತಕ, ವಿಶ್ವಾಸಘಾತಕ ಸಂಗತಿ ಹೊರಬಿತ್ತು. 59 ದಿನಗಳ ನಂತರ ರಹಸ್ಯವನ್ನು ಕೊನೆಗೂ ಭೇದಿಸಲಾಯಿತು. ಕಾಕಿನಾಡದ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಅಕ್ಬರ್ ಅಜಂ ಅವರ ಮೊದಲ ಪತ್ನಿ 15 ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿ, ಮೃತಪಟ್ಟಿದ್ದರು. ಆ ನಂತರ ಅಹ್ಮದುನೀಸಾ ಬೇಗಂ ಅವರನ್ನು ಅಜಂ ವಿವಾಹವಾದರು. ಅವರಿಬ್ಬರಿಗೂ ಇಬ್ಬರು ಮಕ್ಕಳು ಆದರು.. ಒಬ್ಬ ಮಗ ಮತ್ತು ಮಗಳು. ತನ್ನ ಜೀವನ ಮತ್ತೆ ಹಳಿಗೆ ಬಂತು, ಸಂತೋಷ ನೆಮ್ಮದಿ ತನ್ನ ಬಾಳಲ್ಲಿ ಮನೆಮಾಡಿದೆ ಎಂದುಕೊಂಡಿದ್ದ ಆಜಂ ಗೆ ಪತ್ನಿ ಅಹಮದುನೀಸಾಳ ಷಡ್ಯಂತ್ರ ಗ್ರಹಿಸಲಾಗಲಿಲ್ಲ.

ಅಜಂ ತಂದೆ-ತಾಯಿ ಕೂಡ ಕಾಕಿನಾಡದಲ್ಲಿ ನೆಲೆಸಿದ್ದಾರೆ. ತನ್ನ (ಎರಡನೆಯ) ಪತ್ನಿಗೆ ಹೊಸ ಫೋನ್ ಖರೀದಿಸಿದ್ದ ಆಜಂ, ಆಕೆಯ ಬಳಿಯಿದ್ದ ಹಳೆಯ ಫೋನ್ ಅನ್ನು ತಂದೆ ಹುಸೇನ್‌ಗೆ ನೀಡಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಏಕೆಂದರೆ ಮುಂದೆ ಪ್ರಕರಣ ಭೇದಿಸಲು ಪೊಲೀಸರಿಗೆ ಅದೇ ಪ್ರಮುಖ ಅಸ್ತ್ರವಾಗುತ್ತದೆ. ಈ ಮಧ್ಯೆ, ಜೂನ್ 23ರಂದು ಅಜಂ ಸಾವಿನಿಂದ ತೀವ್ರ ನೊಂದಿದ್ದ ಹುಸೇನ್ ಮಗನ ಸಾವು ಸಹಜ ಎಂದು ಭಾವಿಸಿದ್ದರು. ಆದರೆ, ಸೊಸೆಯ ಹಳೆಯ ಮೊಬೈಲ್ ಫೋನ್ ಅನ್ನು ತಾವೇ ಬಳಸುತ್ತಿದ್ದ ಅಪ್ಪ ಹುಸೇನ್… ಇತ್ತೀಚೆಗೆ ಅದರಲ್ಲಿದ್ದ ವಾಟ್ಸಾಪ್ ಚಾಟ್, ವಾಯ್ಸ್ ಮೆಸೇಜ್ ಗಳನ್ನೆಲ್ಲ ನೋಡಿ ಬೆಚ್ಚಿಬಿದ್ದಿದ್ದಾರೆ.

ಸೊಸೆ ಅಹ್ಮದುನೀಸಾ-ಅಜಂ ವಾಸವಿದ್ದ ಅದೇ ಅಪಾರ್ಟ್ಮೆಂಟ್​​ ಮೇಲಿನ ಮಹಡಿಯಲ್ಲಿ ರಾಜಸ್ಥಾನ ಮೂಲದ ರಾಜೇಶ್​ ಜೈನ್ ಮತ್ತು ಮೆಡಿಕಲ್ ರೆಪ್ರೆಸೆಂಟೇಟೀವ್ ಕಿರಣ್ ಸಹ ವಾಸವಿದ್ದರು. ಸೊಸೆ ಅಹ್ಮದುನೀಸಾ ಆ ಇಬ್ಬರೂ ಯುವಕರೊಂದಿಗೆ ನಡೆಸಿದ್ದ ರಹಸ್ಯ ವಾಟ್ಸಪ್​ ಚಾಟ್ ಗಳೆಲ್ಲಾ ಮಾವ ಬಳಸುತ್ತಿದ್ದ ಹಳೆಯ ಫೋನ್​ನಲ್ಲಿ ಭದ್ರವಾಗಿ ಕುಳಿತಿತ್ತು. ಇದನ್ನೆಲ್ಲಾ ಸಾದ್ಯಂತವಾಗಿ ಕೇಳಿಸಿಕೊಂಡ ಮಾವ ಹುಸೇನ್ ಅವರಿಗೆ … ತಮ್ಮ ಮಗ ಅಜಂ ಸಾವು ಸಹಜವಲ್ಲ ಎಂಬುದು ಖಚಿತವಾಗಿದೆ. ಅವರು ಇದೇ ತಿಂಗಳ 17 ರಂದು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಸಾವಿಗೀಡಾದ ಅಜಂ ಅವರ ಅಪ್ಪ ಹುಸೇನ್ ಅವರ ದೂರಿನ ಮೇರೆಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಫೀಲ್ಡ್‌ಗೆ ಇಳಿದಿದ್ದಾರೆ. ಆಜಂ ಶವವನ್ನು ಹೊರತೆಗೆಸಿದ್ದಾರೆ. ಜಿಜಿಎಚ್ ಫೋರೆನ್ಸಿಕ್ ವೈದ್ಯರ ತಂಡವೂ ಕಣಕ್ಕಿಳಿದಿದೆ… ಮರಣೋತ್ತರ ಪರೀಕ್ಷೆಯೂ ನೆರವೇರಿದೆ. ಈ ರೀತಿ ತಮ್ಮದೇ ಶೈಲಿಯಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿಗಳು ಮನವರಿಕೆಯಾಗಿವೆ. ಬೇಗಂ ತನ್ನ ಪತಿಯ ಕೊಲೆಗಾಗಿ ಅನೇಕ ದಿನಗಳಿಂದ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಆ ಇಬ್ಬರೂ ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಅಂತಿಮವಾಗಿ ಜೂನ್ 23 ಅಜಂಗೆ ಮುಹೂರ್ತವಿಟ್ಟಿದ್ದಾರೆ ಆ ತ್ರಿವಳಿ ಪಾತಕಿಗಳು. ಅಂದು ಸೊಸೆ ಅಹ್ಮದುನೀಸಾ ತನ್ನ ಪತಿಗೆ ಮೊದಲು ನಿದ್ರೆ ಮಾತ್ರೆಗಳನ್ನು ಕೊಟ್ಟಿದ್ದಾಳೆ. ಗಾಢ ನಿದ್ರೆಗೆ ಜಾರಿದ ನಂತರ ಅಜಂ ಮನೆಯೊಳಕ್ಕೆ ವೈದ್ಯ ಪ್ರತಿನಿಧಿ ಕಿರಣ್ ಒಳಹೋಗಿದ್ದಾನೆ. ತನಗೆ ವೃತ್ತಿ ಸಹಜವಾಗಿ ಸಲೀಸಾಗಿ ಸಿಗುತ್ತಿದ್ದ ಕ್ಲೋರೋಫಾರ್ಮ್‌ನಿಂದ ಅದ್ದಿದ ಬಟ್ಟೆಯನ್ನು ನಿದ್ರಿಸುತ್ತಿದ್ದ ಅಜಂ ಮುಖ-ಮೂಗನ್ನು ಬಲವಾಗಿ ಒತ್ತಿಹಿಡಿದ್ದಾನೆ. ಅಹಮದುನ್ನೀಸಾ ಕೂಡ ಕಿರಳನಿಗೆ ಸಹಾಯ ಮಾಡಿದ್ದಾಳೆ. ಇದರಿಂದ ಉಸಿರುಗಟ್ಟಿ ಅಕ್ಬರ್ ಅಜಂ ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಆಗುತ್ತಿರುವಾಗ… ರಾಜೇಶ್ ಜೈನ್ ಎಂಬ ಮೂರನೆಯ ಪಾತಕಿ ಮನೆಯ ಹೊರಗೆ ಕಾವಲು ಕಾಯುತ್ತಿದ್ದ. ಇದು ಮುಂದೆ ಪೊಲೀಸರ ತನಿಖೆಯಲ್ಲಿ ಬಹಿರಂಗವಾದ ವಿಚಾರ.

ಮಿತಿಮೀರಿದ ಮದ್ಯ ಸೇವನೆಯಿಂದ ಅಜಂ ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಆಪ್ತ ಯುವಕರ ನೆರವಿನಿಂದ ಪತ್ನಿಯೇ ಈ ದುಷ್ಕೃತ್ಯ ಎಸಗಿದ್ದಾಳೆ ಎಂದು ಖಚಿತಪಡಿಸಿಕೊಂಡು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊನೆಗೂ 59 ದಿನಗಳ ನಂತರ ಕೊಲೆ ರಹಸ್ಯ ಭೇದಿಸಿದ ಕಾಕಿನಾಡ ಖಾಕಿಗಳು… ಸೊಸೆ ಅಹ್ಮದುನೀಸಾ ಜೊತೆಗೆ ಕಿರಣ್ ಮತ್ತು ರಾಜೇಶ್ ಜೈನ್ ಅವರನ್ನೂ ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಆದರೆ ಈ ಕೊಲೆ ಮಾಡಿದ್ದು ಯಾಕೆ? ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಅಜಂರನ್ನು ಮದುವೆಯಾಗಬೇಕು ಎಂದು ಅವಳಿಗೆ ಅನಿಸಿದ್ದು ಏಕೆ? ಎಂಬೆಲ್ಲಾ ವಿಷಯಗಳು ಹೊರಬರಬೇಕಿವೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

To read more in Telugu click here

Published On - 5:29 pm, Mon, 22 August 22