ಬಾಲಕಿಯರ ಬೆತ್ತಲೆ ಫೋಟೋಗೆ ಪೀಡಿಸುತ್ತಿದ್ದ ಆರೋಪಿ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Oct 13, 2020 | 3:39 PM

ಬೆಂಗಳೂರು:ಬೆತ್ತಲೆ ಫೋಟೋ ಕಳಿಸುವಂತೆ ಅಪ್ರಾಪ್ತ ಹೆಣ್ಮಕ್ಕಳ ಕಾಡ್ತಿದ್ದ ಆರೋಪಿಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಜಗದೀಶ್ ಬಂಧಿತ ಆರೋಪಿ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರೋ ಅಪ್ರಾಪ್ತೆಯರೇ ಎಚ್ಚರರ! ಆರೋಪಿ ಜಗದೀಶ್ ಅಪ್ರಾಪ್ತ ಹೆಣ್ಣುಮಕ್ಕಳನ್ನ ಟಾರ್ಗೆಟ್ ಮಾಡಿ ಪದೇ ಪದೆ ಕಾಲ್ ಮಾಡಿ ಕಿರುಕುಳ ನೀಡ್ತಿದ್ದ. ಯುವತಿಯರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿ ಚಾಟಿಂಗ್ ಮಾಡ್ತಿದ್ದ. ಬೆತ್ತಲೆ ಫೋಟೋಗೆ ಡಿಮ್ಯಾಂಡ್ ಮಾಡ್ತಿದ್ದ. ಬೆತ್ತಲೆ ಫೋಟೋ ಕಳಿಸದಿದ್ದರೆ ಅಪ್ರಾಪ್ತೆಯರ ಹೆಸರಿನಲ್ಲಿ ನಕಲಿ ಅಕೌಂಟ್ […]

ಬಾಲಕಿಯರ ಬೆತ್ತಲೆ ಫೋಟೋಗೆ ಪೀಡಿಸುತ್ತಿದ್ದ ಆರೋಪಿ ಅರೆಸ್ಟ್
Follow us on

ಬೆಂಗಳೂರು:ಬೆತ್ತಲೆ ಫೋಟೋ ಕಳಿಸುವಂತೆ ಅಪ್ರಾಪ್ತ ಹೆಣ್ಮಕ್ಕಳ ಕಾಡ್ತಿದ್ದ ಆರೋಪಿಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಜಗದೀಶ್ ಬಂಧಿತ ಆರೋಪಿ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರೋ ಅಪ್ರಾಪ್ತೆಯರೇ ಎಚ್ಚರರ!
ಆರೋಪಿ ಜಗದೀಶ್ ಅಪ್ರಾಪ್ತ ಹೆಣ್ಣುಮಕ್ಕಳನ್ನ ಟಾರ್ಗೆಟ್ ಮಾಡಿ ಪದೇ ಪದೆ ಕಾಲ್ ಮಾಡಿ ಕಿರುಕುಳ ನೀಡ್ತಿದ್ದ. ಯುವತಿಯರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿ ಚಾಟಿಂಗ್ ಮಾಡ್ತಿದ್ದ. ಬೆತ್ತಲೆ ಫೋಟೋಗೆ ಡಿಮ್ಯಾಂಡ್ ಮಾಡ್ತಿದ್ದ. ಬೆತ್ತಲೆ ಫೋಟೋ ಕಳಿಸದಿದ್ದರೆ ಅಪ್ರಾಪ್ತೆಯರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು I’m available ಎಂದು ಪೋಸ್ಟ್ ಹಾಕಿ ಫೋನ್ ನಂ‌ಬರ್ ಹಾಕ್ತಿದ್ದ. ಕೆಟ್ಟದಾಗಿ ಯುವತಿಯರನ್ನ ಬಿಂಬಿಸಿ, ಅದೇ ರೀತಿ ಫೋಟೋ ಕಳುಹಿಸುವಂತೆ ವಿವಿಧ ನಂಬರ್​ಗಳಿಗೆ ಮೆಸೇಜ್ ಮಾಡಿ ಕ್ವಾಟ್ಲೆ ಕೊಡ್ತಿದ್ದ.

ಇದೇ ರೀತಿ ವೈಟ್ ಫೀಲ್ಡ್​ನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಕಿರುಕುಳ ನೀಡ್ತಿದ್ದ. ಬೇಸತ್ತ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಅಲರ್ಟ್ ಆದ ಪೋಷಕರು ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಆರೋಪಿ ವಿರುದ್ಧ ಒಂದೇ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಹೀಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ಟೀಂ ರೆಡಿ ಮಾಡಿ ಬಂಧಿಸಿದ್ದಾರೆ. ಜಗದೀಶ್​ನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.