ಬೆಳಗಾವಿ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ದೇಶ ಕಾಯುವ ಯೋಧ ಪತಿಯನ್ನೇ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊನ್ನಿಹಾಳ ಗ್ರಾಮದ ನಿವಾಸಿ 32 ವರ್ಷದ ದೀಪಕ್ ಪಟ್ಟಣದಾರ ಹತ್ಯೆಗೀಡಾದ ಯೋಧ. ಈತ ನವದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ. ತನ್ನ ಪತ್ನಿಗೆ ಓಡಾಡಲು ತೊಂದರೆ ಯಾಗಬಾರದು ಎಂದು ಕಾರು ಖರೀದಿ ಮಾಡಿ, ಅದಕ್ಕೆ ಪ್ರಶಾಂತ ಪಾಟೀಲ್ ಎಂಬ ಕಾರು ಚಾಲಕನನ್ನು ನೇಮಿಸಿದ್ದ.
ಆದರೆ ಯೋಧನ ಪತ್ನಿ ಅಂಜಲಿ ಕಾರು ಚಾಲಕನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಪತ್ನಿಯ ಸಂಬಂಧದ ವಿಷಯ ಯೋಧ ದೀಪಕ್ಗೆ ಗೊತ್ತಾಗಿದೆ. ಹೀಗಾಗಿ ಪತ್ನಿ ಅಂಜಲಿಗೆ ಬುದ್ಧಿವಾದ ಹೇಳಿದ್ದಾನೆ. ಆದ್ರೂ ಅಂಜಲಿ ಮತ್ತು ಪ್ರಶಾಂತ್ ದೀಪಕ್ನ ಮಾತನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ನಡುವೆ ಪತಿ ದೀಪಕ್ ತವರಿಗೆ ವಾಪಸಾಗುವ ಮಾಹಿತಿ ಅಂಜಲಿ ಹಾಗೂ ಪ್ರಶಾಂತ್ಗೆ ಗೊತ್ತಾಗಿದೆ. ದೀಪಕ್ನನ್ನು ಕೊಲ್ಲಲು ಇಬ್ಬರು ಸಂಚು ಹಾಕಿದ್ದಾರೆ.
ಪತಿ ಹತ್ಯೆಗೈದು ಕಾಣೆಯಾಗಿದ್ದಾರೆಂದು ಕಥೆ ಕಟ್ಟಿದ್ದ ಹಂತಕಿ:
ದೀಪಕ್ ಮನೆಗೆ ಹಿಂತಿರುಗುತ್ತಿದ್ದಂತೆ ಜನವರಿ 28ರಂದು ಗೊಡಚನಮಲ್ಕಿಗೆ ಕರೆದೊಯ್ದು ಪ್ರಿಯಕರ, ಮತ್ತಿಬ್ಬರ ಜೊತೆ ಸೇರಿ ಪತಿಯ ಹತ್ಯೆ ಮಾಡಿಸಿದ್ದಾಳೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಫೆಬ್ರವರಿ 4ರಂದು ಪತ್ನಿ ಅಂಜಲಿ ಪತಿ ಕಾಣೆಯಾಗಿದ್ದಾನೆಂದು ಮಾರಿಹಾಳ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು ಪ್ರಕರಣದ ತನಿಖೆ ಕೈಗೊಂಡಾಗ ಅಂಜಲಿ, ಪ್ರಶಾಂತ್ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ. ನಂತರ ಆರೋಪಿಗಳನ್ನು ಬಂಧಿಸಿ ಚಿವಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಹಂತಕಿ ಪತ್ನಿ ಅಂಜಲಿ ಮತ್ತು ಪ್ರಿಯಕರ ಪ್ರಶಾಂತ್ನನ್ನು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಾದ ನವೀನ್ ಕೆಂಗೇರಿ, ಪ್ರವೀಣ್ ಹುಡೇದ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ.
Published On - 9:44 am, Sun, 23 February 20