ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿಯೇ ಜೋಡಿ ಕೊಲೆ
ಮಂಡ್ಯ: ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿಯೇ ಜೋಡಿ ಕೊಲೆಯಾಗಿರುವ ಘಟನೆ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ನಡೆದಿದೆ. ಮಹದೇಶ್ವರಪುರ ಗ್ರಾಮದ ಕೋಳಿ ಸುರೇಶ ಹಾಗೂ ನಾಗರಾಜು ಎಂಬುವವರಿಗೆ ಇದೇ ಗ್ರಾಮದ ರೌಡಿ ಶೀಟರ್ ಕೃಷ್ಣ ಹಾಗೂ ಸಹಚರರು ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕೊಲೆಗೆ ಪ್ರೇಮ ಪ್ರಕರಣ ಹಾಗೂ ಹಣಕಾಸು ವ್ಯವಹಾರ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಕೋಳಿ ಸುರೇಶ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದ. ಹಾಗೂ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. […]
ಮಂಡ್ಯ: ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿಯೇ ಜೋಡಿ ಕೊಲೆಯಾಗಿರುವ ಘಟನೆ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ನಡೆದಿದೆ. ಮಹದೇಶ್ವರಪುರ ಗ್ರಾಮದ ಕೋಳಿ ಸುರೇಶ ಹಾಗೂ ನಾಗರಾಜು ಎಂಬುವವರಿಗೆ ಇದೇ ಗ್ರಾಮದ ರೌಡಿ ಶೀಟರ್ ಕೃಷ್ಣ ಹಾಗೂ ಸಹಚರರು ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಕೊಲೆಗೆ ಪ್ರೇಮ ಪ್ರಕರಣ ಹಾಗೂ ಹಣಕಾಸು ವ್ಯವಹಾರ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಕೋಳಿ ಸುರೇಶ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದ. ಹಾಗೂ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಪ್ರಕರಣ ಸಂಬಂಧಿಸಿ ರೌಡಿ ಶೀಟರ್ ಕೃಷ್ಣನನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದಾರೆ.
Published On - 11:15 am, Sat, 22 February 20