ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?

| Updated By: ಸಾಧು ಶ್ರೀನಾಥ್​

Updated on: Sep 07, 2020 | 9:53 AM

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು. ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು […]

ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?
ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
Follow us on

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು.
ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು ನಿಜವೇ, ಆದರೆ ಅವಳಲ್ಲಿ ಈ ಪಾಟಿ ಧೈರ್ಯವೇ ಅಂತ ಜನ ಮಾತಾಡಿಕೊಳ್ಳುತ್ತಿರುವುದು ಉಪ ಮುಖ್ಯಮಂತ್ರಿಗಳಿಗೆ ಗೊತ್ತಿದ್ದಂತಿಲ್ಲ.

ಸಿಸಿಬಿ ಅಧಿಕಾರಿಗಳಿಂದ ರಾಗಿಣಿ ವಿಚಾರಣೆ ಶುರುವಾಗುವ ಮೊದಲೇ, ಆಕೆ ಹೆಚ್ಚು ಪ್ರಶ್ನೆಗಳನ್ನು ಕೇಳಬೇಡಿ, ಬೇಗ ವಾಪಸ್ಸು ಕಳಸಿಬಿಡಿ ಅಂತ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ತಾರೆಯರು ಫೋನ್ ಮಾಡಿದರಂತೆ. ಆಕೆಯ ರೀಚ್ ಬಗ್ಗೆ ನಿಜಕ್ಕೂ ದಿಗ್ಭ್ರಮೆ ಉಂಟಾಗುತ್ತದೆ. ನೀವ್ಯಾಕೆ ಅವಳ ಪರವಾಗಿ ಮಾತಾಡುತ್ತಿರುವಿರಿ ಅಂತ ಪೊಲೀಸರು ಪ್ರಶ್ನಿದರೋ ಇಲ್ಲವೋ ಅಂತ ಜನಕ್ಕಿನ್ನೂ ಗೊತ್ತಾಗಿಲ್ಲ. 

ಯಾಱರು ಫೋನ್ ಮಾಡಿರಬಹುದೆಂಬ ಒಂದು ಚಿಕ್ಕ ಸುಳಿವೇನಾದರೂ ಕಾರಜೋಳ ಅವರಲ್ಲಿರಬಹುದೆ? ಒಂದು ಮಾತ್ರ ನಿಜ, ಈ ರಾಗಿಣಿ ಸಾಮಾನ್ಯವಾದವಳಲ್ಲ. ಆಕೆಯ ರಕ್ಷಣೆಗೆ ದೊಡ್ಡ ಹಿಂಡೇ ಟೊಂಕಕಟ್ಟಿ ನಿಂತಿರುವಂತಿದೆ. ಆಕೆ ಬಾಯಿ ಬಿಟ್ಟರೆ, ರಾಜಕಾರಣಿಗಳು ಸೇರಿದಂತೆ ಹಲವಾರು ಸೆಲಿಬ್ರಿಟಿಗಳ ಜಾತಕ ಬಯಲಾಗುವುದು ನಿಶ್ಚಿತ.

ಆದರೆ, ಪೊಲೀಸರಿಗೆ ಬೇಕಾಗಿರುವುದೇನೆಂದರೆ ಅವರ ತನಿಖೆಯಲ್ಲಿ ತೊಡರುಗಾಲು ಹಾಕದೆ, ಮುಕ್ತವಾಗಿ ಮತ್ತು ನಿರ್ಭೀತಿಯಿಂದ ತನಿಖೆ ಮಾಡಲು ಬಿಡೋದು. ಅದು ಸಾಧ್ಯವಿದೆಯೇ ಎಂಬ ಶಂಕೆ ಜನರಲ್ಲಿ ಅದಾಗಲೇ ಮೂಡಿದೆ.

Published On - 7:47 pm, Sat, 5 September 20