ಬಿಹಾರ: ವರದಕ್ಷಿಣೆ ಕೊಡಲಿಲ್ಲ ಎಂದು ಸೊಸೆ, ಆಕೆಯ ತಂದೆ ಹಾಗೂ ಸಹೋರನನ್ನು ಗುಂಡಿಕ್ಕಿ ಹತ್ಯೆಗೈದ ಮಾವ

|

Updated on: Feb 18, 2024 | 12:16 PM

ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ರ್ಷದ ಮಹಿಳೆ ಮತ್ತು ಆಕೆಯ ತಂದೆ ಮತ್ತು ಸಹೋದರನನ್ನು ಆಕೆಯ ಮಾವ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾಹೇಬ್ ಪುರ್ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷ್ಣುಪುರ್ ಅಹುಕ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಿಹಾರ: ವರದಕ್ಷಿಣೆ ಕೊಡಲಿಲ್ಲ ಎಂದು ಸೊಸೆ, ಆಕೆಯ ತಂದೆ ಹಾಗೂ ಸಹೋರನನ್ನು ಗುಂಡಿಕ್ಕಿ ಹತ್ಯೆಗೈದ ಮಾವ
ಮದುವೆ
Follow us on

ವರದಕ್ಷಿಣೆ ಕೊಡಲಿಲ್ಲ ಎನ್ನುವ ಕೋಪದಲ್ಲಿ ಸೊಸೆ, ಆಕೆಯ ತಂದೆ ಹಾಗೂ ಸಹೋದರನನ್ನು ಮಾವ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಾಹೇಬ್ ಪುರ್ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷ್ಣುಪುರ್ ಅಹುಕ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ನೀಲು ಕುಮಾರಿ (25), ಆಕೆಯ ತಂದೆ ಉಮೇಶ್ ಯಾದವ್ ಮತ್ತು ಸಹೋದರ ರಾಜೇಶ್ ಯಾದವ್ ಎಂದು ಗುರುತಿಸಲಾಗಿದೆ. ಅವರು ಬೇಗುಸರಾಯ್ ಜಿಲ್ಲೆಯ ಶ್ರೀನಗರ ಪ್ರದೇಶದ ನಿವಾಸಿಗಳು.
ನಿವಾರ ಸಂಜೆ ಉಮೇಶ್ ಯಾದವ್ ತನ್ನ ಮಗ ಮತ್ತು ಮಗಳೊಂದಿಗೆ ನೀಲು ಕುಮಾರಿ ಅವರ ಅತ್ತೆಯ ಮನೆಗೆ ಹೋದಾಗ ಘಟನೆ ನಡೆದಿದೆ.

ನೀಲು ಕುಮಾರಿ ಅವರ ಮಾವ ಇದ್ದಕ್ಕಿದ್ದಂತೆ ತಮ್ಮ ಬಂದೂಕನ್ನು ತೆಗೆದುಕೊಂಡು ಅವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಹೊಡೆದರು, ಅವರು ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.

ಗ್ರಾಮದ ಮುಖಿಯ ಸುಬೋಧ್ ಕುಮಾರ್ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಬಲವಂತದ ಮದುವೆಪ್ರಕರಣವಾಗಿದ್ದು, ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸಲಾಗಿತ್ತು. ನೀಲುಕುಮಾರಿ ಅವರ ಅತ್ತಿಗೆಯೇ ಇದಕ್ಕೆಲ್ಲಾ ಕಾರಣ. ಮದುವೆಯಾಗಿ ಎರಡು ವರ್ಷ ಕಳೆದರೂ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿರಲಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: Viral: ಈ ಬಂಧನ ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ

ಆಕೆಯ ಅತ್ತೆಯ ಮನೆಯಲ್ಲಿ 15 ಲಕ್ಷ ರೂ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಹೇಗೋ ಹಣ ಸಂಗ್ರಹ ಮಾಡಿಕೊಂಡು ಮಗಳನ್ನು ಆಕೆಯ ಗಂಡನ ಮನೆಗೆ ಕರೆದುಕೊಂಡು ಹೋದಾಗ ಆಕೆ ತಮ್ಮ ಮನೆಗೆ ಬರುವುದು ಬೇಡ ಎಂದು ಹೇಳಿದ್ದರು. ಆಗ ವಾಗ್ವಾದ ನಡೆದಿತ್ತು. ಕೋಪದಲ್ಲಿ ಆಕೆಯ ಮಾವ ಮೂವರನ್ನೂ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ