ಹೋಂ ವರ್ಕ್ ಮಾಡದಿದ್ದಕ್ಕೆ ಬಾಲಕಿಯ ಕೈಕಾಲು ಕಟ್ಟಿಹಾಕಿ ಉರಿಬಿಸಿಲಲ್ಲಿ ಟೆರೇಸ್ ಮೇಲೆ ಮಲಗಿಸಿದ ಅಮ್ಮ

ಮನೆಯ ಛಾವಣಿಯಲ್ಲಿ ಬಾಲಕಿಯ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಬಿಸಿಲಿಗೆ ಮೈ ಚರ್ಮ ಸುಡುತ್ತಿದೆ ಎಂದು ಆ ಬಾಲಕಿ ಕಿರುಚುತ್ತಿದ್ದಾಳೆ.

ಹೋಂ ವರ್ಕ್ ಮಾಡದಿದ್ದಕ್ಕೆ ಬಾಲಕಿಯ ಕೈಕಾಲು ಕಟ್ಟಿಹಾಕಿ ಉರಿಬಿಸಿಲಲ್ಲಿ ಟೆರೇಸ್ ಮೇಲೆ ಮಲಗಿಸಿದ ಅಮ್ಮ
ವೈರಲ್ ವಿಡಿಯೊದ ದೃಶ್ಯ
Edited By:

Updated on: Jun 08, 2022 | 8:08 PM

ಬಾಲಕಿಯ  ಕೈ ಕಾಲು ಕಟ್ಟಿ ಹಾಕಲಾಗಿದೆ. ದೆಹಲಿಯ ಉರಿ ಬಿಸಿಲಲ್ಲಿ ಟೆರೇಸ್ ಮೇಲೆ ಒದ್ದಾಡುತ್ತಿರುವ 8ರ ಹರೆಯದ ಬಾಲಕಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ(Social Media) ವೈರಲ್ ಆಗಿದೆ. ಈ ಬಗ್ಗೆ ದೆಹಲಿ ಪೊಲೀಸರು (Delhi Police) ತನಿಖೆ ನಡೆಸಿದ್ದು, ಮಗಳು ಹೋಂ ವರ್ಕ್ (Home Work) ಮಾಡದೇ ಇದ್ದುದಕ್ಕೆ ಆಕೆಯ ಅಮ್ಮ ಈ ಶಿಕ್ಷೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಮೊದಲಿಗೆ ಈ ವಿಡಿಯೊ ಕರವಾಲ್ ನಗರದ್ದು ಎಂದು ಹೇಳಲಾಗಿತ್ತು. ಆದರೆ ಇಂಥಾ ಘಟನೆ ಬಗ್ಗೆ ಪೊಲೀಸರಿಗೆ ಯಾವುದೇ ಪುರಾವೆ ಸಿಗಲಿಲ್ಲ. ಅದರ ನಂತರ ತುಕ್ಮಿಪುರ್​​ನ ಖಜೂರಿ ಖಾಸ್ ಪ್ರದೇಶದಲ್ಲಿನ ವಿಡಿಯೊ ಇದು ಎಂದು ತಿಳಿದುಬಂದಿದ್ದು, ಪೊಲೀಸರು ಆ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಮನೆಯ ಛಾವಣಿಯಲ್ಲಿ ಬಾಲಕಿಯ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಬಿಸಿಲಿಗೆ ಮೈ ಚರ್ಮ ಸುಡುತ್ತಿದೆ ಎಂದು ಆ ಬಾಲಕಿ ಕಿರುಚುತ್ತಿದ್ದಾಳೆ. ಹೋಂ ವರ್ಕ್ ಮಾಡದೇ ಇರುವುದಕ್ಕೆ ನಾನು ಮಗಳಿಗೆ ಶಿಕ್ಷೆ ಕೊಟ್ಟಿದ್ದೆ. ಐದಾರು ನಿಮಿಷ ಅಷ್ಟೇ ಆಕೆಯನ್ನು ನಿಲ್ಲಿಸಿದ್ದು ಆಮೇಲೆ ಅವಳನ್ನು ಕೆಳಗೆ ಕರೆದುಕೊಂಡು ಬಂದಿದ್ದೆ ಎಂದು ಹೇಳಿದ್ದಾರೆ.


ದೆಹಲಿ ಪೊಲೀಸರಿಂದ ಕ್ರಮ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆದ ಬೆನ್ನಲ್ಲೇ ದೆಹಲಿ ಪೊಲೀಸರು ಕ್ರಮತೆಗೆದುಕೊಂಡಿದ್ದಾರೆ. ಆ ಮನೆ ಎಲ್ಲಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ದೆಹಲಿ ಪೊಲೀಸ್, ಒಂದು ಹೆಣ್ಣು ಮಗುವನ್ನು ಮನೆಯ ಛಾವಣಿಯ ಮೇಲೆ ಕಟ್ಟಿಹಾಕಿರುವ ವ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಆಕೆಯ ಗುರುತು ಮತ್ತು ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಮಗುವಿನ ಕುಟುಂಬವನ್ನು ಗುರುತಿಸಲಾಗಿದೆ ಮತ್ತು ಸೂಕ್ತ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ