ಬೆಂಗಳೂರು ಡಿ.04: ಈ ಪ್ರಕರಣದಲ್ಲಿ ಚಾಲಾಕಿ ಖದೀಮರು ತಮ್ಮ ಕೈ ಚಳಕವನ್ನು ಪೊಲೀಸರಿಗೆ (Police) ತೋರಿಸಿದ್ದಾರೆ. ನಗರದ ಅಭಿನಯ ಜಂಕ್ಷನ್ನಲ್ಲಿರುವ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್ ಅನ್ನು ಕಳ್ಳರು (Thieves) ಕದ್ದು ಪರಾರಿಯಾಗಿದ್ದಾರೆ. ನವೆಂಬರ್ 22 ರಂದು ಕೆಆರ್ ಮಾರ್ಕೆಟ್ (KR Market) ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರು ಪೊಲೀಸ್ ಚೌಕಿಯೊಳಗೆ ಬಂದು ಬ್ಯಾಗ್ನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕೊಟ್ಟಿದ್ದ ಬಾಡಿ ವೊರ್ನ್ ಕ್ಯಾಮೆರಾವನ್ನು ಇಟ್ಟಿದ್ದರು.
ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ಚೌಕಿಯಿಂದ ಹೊರಗೆ ಹೋಗಿದ್ದಾರೆ. ಇದನ್ನು ಗಮನಿಸಿದ ಖದೀಮರು ಮಹಿಳಾ ಪೊಲೀಸ್ ಸಿಬ್ಬಂದಿಯ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮಹಿಳಾ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಒಂದೇ ತಿಂಗಳಲ್ಲಿ ರಾಣೆಬೆನ್ನೂರ ತಾಲೂಕಿನ ಗ್ರಾಮೀಣ ಭಾಗದ ಏಳು ಶಾಲೆಗಳಲ್ಲಿ ಕಳ್ಳತನವಾಗಿದೆ. ಏಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಡುಗೆ ಕೋಣೆಗಳಲ್ಲಿನ ಸಾಮಾಗ್ರಿಗಳನ್ನು ಕಳ್ಳರು ಕದ್ದಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ರಾಣೆಬೆನ್ನೂರ ತಾಲುಕಿನ ಹರನಗಿರಿ, ಮೈದೂರ, ಮಾಕನೂರ ಪ್ರೌಢಶಾಲೆ, ಕೋಟಿಹಾಳ, ಗಂಗಾಪುರ ಪ್ರಾಥಮಿಕ ಶಾಲೆಗಳಲ್ಲಿನ ಅಕ್ಕಿ, ಬೇಳೆ, ಎಣ್ಣೆ, ಹಾಲಿನ ಪೌಡರ್ ಚೀಲಗಳು ಕಳ್ಳತನವಾಗಿವೆ. ರಾಣೆಬೆನ್ನೂರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ ಜಿಲ್ಲೆಯ ಹೊಳಲಮ್ಮ ದೇವಿಯ ಚಿನ್ನದ ಸರ, ಬೆಳ್ಳಿ ಕಿರೀಟ ಕದ್ದು ಕಳ್ಳರು ಪರಾರಿ
ಕೊಡಗು: ಕುಶಾಲನಗರ ತಾಲ್ಲೂಕಿನ ಗುಡ್ಡಹೊಸೂರು ಗ್ರಾಮದ ಪಿಎಂ ಇಸ್ಮಾಯಿಲ್ ಎಂಬುವರ ಮನೆಯಲ್ಲಿದ್ದ 45 ಗ್ರಾಂ ಚಿನ್ನವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ರವಿವಾರ ಮಧ್ಯರಾತ್ರಿ 2 ಗಂಟೆಗೆ ಮುಸುಕುಧಾರಿಗಳು ಪಿಎಂ ಇಸ್ಮಾಯಿಲ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಕಳ್ಳರು ಮುಖಕ್ಕೆ ಬೂದಿ ಎರಚಿದ್ದಾರೆ. ಬೂದಿ ಎರಚುತ್ತಿದ್ದಂತೆ ಮನೆಯವರು ಪ್ರಜ್ಞೆ ತಪ್ಪಿದ್ದಾರೆ.
ನಂತರ ಮನೆಯೊಳಗೆ ಹೋಗಿ 45 ಗ್ರಾಂ ಚಿನ್ನ ಮತ್ತು ಐದು ಸಾವಿರ ರೂ. ನಗದು ದೊಚಿ ಪರಾರಿಯಾಗಿದ್ದಾರೆ. ಇದಕ್ಕೂ ಮೊದಲು ಮತ್ತೊಂದು ಮನೆಯಲ್ಲಿ ಕಳ್ಳತನಾ ಮಾಡಲು ಯತ್ನಿಸಿದ್ದರು. ಆದರೆ ಅದು ವಿಫಲವಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Mon, 4 December 23