ಎಣ್ಣೆ ಪಾರ್ಟಿಯಲ್ಲಿ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಎಣ್ಣೆ ಪಾರ್ಟಿಯಲ್ಲಿ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ. ತಡರಾತ್ರಿ ಕೆಂಗೇರಿಯಲ್ಲಿ ಬಾಟಲಿಯಿಂದ ಚುಚ್ಚಿ 20 ವರ್ಷದ ಮಣಿ ಎಂಬುವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೆಂಗೇರಿಯ ರೂಮ್​ನಲ್ಲಿ ಸ್ನೇಹಿತರ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಣಿ ಎಂಬುವನಿಗೆ ಬಾಟಲಿಯಿಂದ ತಿವಿದು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ […]

ಎಣ್ಣೆ ಪಾರ್ಟಿಯಲ್ಲಿ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ
Follow us
ಸಾಧು ಶ್ರೀನಾಥ್​
| Updated By:

Updated on: Jun 01, 2020 | 3:00 PM

ಬೆಂಗಳೂರು: ಎಣ್ಣೆ ಪಾರ್ಟಿಯಲ್ಲಿ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ. ತಡರಾತ್ರಿ ಕೆಂಗೇರಿಯಲ್ಲಿ ಬಾಟಲಿಯಿಂದ ಚುಚ್ಚಿ 20 ವರ್ಷದ ಮಣಿ ಎಂಬುವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕೆಂಗೇರಿಯ ರೂಮ್​ನಲ್ಲಿ ಸ್ನೇಹಿತರ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಮಣಿ ಎಂಬುವನಿಗೆ ಬಾಟಲಿಯಿಂದ ತಿವಿದು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.