Engineering: ಸೆಮಿಕಂಡಕ್ಟರ್ ವಿಷಯದ 2 ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದ AICTE

|

Updated on: Feb 18, 2023 | 6:59 PM

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್​ಗಳನ್ನು ಪ್ರಾರಂಭಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಅಶ್ವಿನಿ ವೈಷ್ಣವ್ ಎಎನ್​ಐ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Engineering: ಸೆಮಿಕಂಡಕ್ಟರ್ ವಿಷಯದ 2 ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದ AICTE
ಇಂಜಿನಿಯರಿಂಗ್
Follow us on

ನವದೆಹಲಿ: ಭಾರತದಲ್ಲಿ ತಂತ್ರಜ್ಞಾನಗಳು ಹೆಚ್ಚಿನ ಬೆಳವಣಿಗೆಗೆ ಹಲವುಯೋಜನೆಗಳನ್ನು ತರಲಾಗುತ್ತಿದೆ.ದೇಶವು ಸೆಮಿಕಂಡಕ್ಟರ್ ಗಳ ಅದ್ಭುತ ವಿನ್ಯಾಸಕಾರನ್ನು ಹೊಂದಿದೆ. ಇಂದು ಪ್ರಪಂಚದ 20% ರಷ್ಟು ಸೆಮಿಕಂಡಕ್ಟರ್ ವಿನ್ಯಾಸಗಳನ್ನು ಭಾರತೀಯ ಇಂಜಿನಿಯರ್‌ಗಳೇ ಮಾಡುತ್ತಿದ್ದಾರೆ. ಇದೀಗ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್​ಗಳನ್ನು ಪ್ರಾರಂಭಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ಪ್ರಧಾನ ಮಂತ್ರಿ ಸೆಮಿಕಾನ್‌ ಇಂಡಿಯಾವನ್ನು 1 ಜನವರಿ 2022 ರಂದು ಪ್ರಾರಂಭಿಸಿದರು. ಪ್ರಮುಖ ಅಂಶವೆಂದರೆ ಭಾರತವು 10 ವರ್ಷಗಳಲ್ಲಿ 85,000 ಸೆಮಿಕಂಡಕ್ಟರ್ ವೃತ್ತಿಪರರನ್ನು ನೀಡಿದೆ. ಹೊಸ ಕೋರ್ಸ್ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಂದು ಶಿಕ್ಷಣ ಸಚಿವಾಲಯದೊಳಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) ಎರಡು ಹೊಸ ಕೋರ್ಸ್​ಗಳನ್ನು ಪ್ರಾರಂಭಿಸಿದೆ” ಎಂದು ಎಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದರು.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ!

“ಹೊಸ ಕೋರ್ಸ್​ಗಳಲ್ಲಿ ಮೊದಲನೆಯದು ಸೆಮಿಕಂಡಕ್ಟರ್‌ಗಳಲ್ಲಿ ಬಿಟೆಕ್ ಪ್ರೋಗ್ರಾಂ ಮತ್ತು ಎರಡನೆಯದು ಸೆಮಿಕಂಡಕ್ಟರ್‌ಗಳಲ್ಲಿ ಡಿಪ್ಲೊಮಾ ಪ್ರೋಗ್ರಾಂ. ಈ ಎರಡು ಕೋರ್ಸ್​ಗಳು ಇಂಜಿನಿಯರಿಂಗ್​ನಲ್ಲಿರುವ ಉತ್ತಮ ಪ್ರತಿಭೆಯನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸಚಿವರು ಹೇಳಿದರು.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ