ರಾಜ್ಯದ 7 ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳ ನೇಮಕ: ರಾಜ್ಯ ಸರ್ಕಾರ ಆದೇಶ

|

Updated on: Mar 20, 2023 | 10:20 PM

ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ 7 ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳ ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ರಾಜ್ಯದ 7 ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳ ನೇಮಕ: ರಾಜ್ಯ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ
Image Credit source: livemint.com
Follow us on

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ 7 ವಿಶ್ವವಿದ್ಯಾಲಯಗಳಿಗೆ (universities) ನೂತನ ಕುಲಪತಿಗಳ ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಕೊಪ್ಪಳ, ಕೊಡಗು, ಚಾಮರಾಜನಗರ, ಬಾಗಲಕೋಟೆ, ಬೀದರ್, ಹಾವೇರಿ ಮತ್ತು ಹಾಸನ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳ ನೇಮಕ ಮಾಡಲಾಗಿದೆ. ಈ ಕುರಿತಾ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು, ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಯಲ್ಲೇ ಉನ್ನತ  ಶಿಕ್ಷಣ ಕಲ್ಪಿಸಲು ಸ್ಥಾಪಿಸಿರುವ ಈ ವಿವಿಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವಿಟರ್​ ಬರೆದುಕೊಂಡಿದ್ದಾರೆ. ಸರ್ಕಾರ ಜಿಲ್ಲೆಗೆ ಒಂದಾದರೂ ವಿಶ್ವವಿದ್ಯಾಲಯ ಇರಬೇಕು ಎನ್ನುವ ತತ್ತ್ವದಡಿಯಲ್ಲಿ ಈ ವಿಶ್ವವಿದ್ಯಾಲಗಳನ್ನು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

​ನೂತನ ಕುಲಪತಿಗಳ ವಿವರ ಹೀಗಿದೆ

  • ಡಾ.ಬಿ.ಕೆ.ರವಿ-ಕೊಪ್ಪಳ ವಿಶ್ವವಿದ್ಯಾಲಯ ನೂತನ ಕುಲಪತಿ
  • ಅಶೋಕ್ ಸಂಗಪ್ಪ ಆಲೂರು-ಕೊಡಗು ವಿವಿಯ ಕುಲಪತಿ
  • ಡಾ.ಎಂ.ಆರ್.ಗಂಗಾಧರ್-ಚಾಮರಾಜನಗರ ವಿವಿ ಕುಲಪತಿ
  • ಡಾ.ಆನಂದ್ ಶರದ್-ಬಾಗಲಕೋಟೆ ವಿವಿ ಕುಲಪತಿ
  • ಡಾ.ಬಿ.ಎಸ್.ಬಿರಾದಾರ-ಬೀದರ್ ವಿವಿಯ ಕುಲಪತಿ
  • ಡಾ.ಸುರೇಶ್ ಹೆಚ್‌ ಜಂಗಮಶೆಟ್ಟಿ-ಹಾವೇರಿ ವಿವಿ ಕುಲಪತಿ
  • ಡಾ.ಟಿ.ಸಿ.ತಾರಾನಾಥ-ಹಾಸನ ವಿವಿ ಕುಲಪತಿ

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:20 pm, Mon, 20 March 23