Sign In

By signing in or creating an account, you agree with Associated Broadcasting Company's Terms & Conditions and Privacy Policy.

Exam Preparation: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದಿದೆಯಾ?

ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿಯೇ ಪರೀಕ್ಷೆಯ ಒತ್ತಡ ಕಂಡುಬರುತ್ತದೆ. ಆದರೆ ನೀವೆಂದಿಗೂ ನಿಮ್ಮ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡವನ್ನು ಹಾಕದಿರಿ. ಇದು ನಿಮ್ಮ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ.

Exam Preparation: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದಿದೆಯಾ?
Follow us
ಅಕ್ಷತಾ ವರ್ಕಾಡಿ
|

Updated on: Mar 20, 2023 | 7:00 AM

ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿಯೇ ಪರೀಕ್ಷೆಯ ಒತ್ತಡ ಕಂಡುಬರುತ್ತದೆ. ಆದರೆ ನೀವೆಂದಿಗೂ ನಿಮ್ಮ ಮಕ್ಕಳ ಮೇಲೆ ಪರೀಕ್ಷೆಯ ಒತ್ತಡವನ್ನು ಹಾಕದಿರಿ. ಇದು ನಿಮ್ಮ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತಾ ಹೋಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಇಂದಿನಿಂದಲೇ ಪ್ರತೀ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಮುಂಜಾನೆ ಎಬ್ಬಿಸಿ ಕನಿಷ್ಟ 2 ಘಂಟೆಗಳ ಕಾಲ ಅವರಿಗೆ ಓದಲು ಹೇಳಿ. ಬೆಳಗ್ಗೆ 4 ರಿಂದ ಬೆಳಗ್ಗೆ 5: 30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಮುಂಜಾನೆ ಬೇಗ ಎದ್ದು ಅಧ್ಯಯನ ಮಾಡುವುದರಿಂದ, ಅಧ್ಯಯನದ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೂಡ ಕಾಣಬಹುದು.

ಮುಂಜಾನೆ ಎದ್ದು ಓದುವುದರಿಂದ ಆಗುವ ಲಾಭಗಳು:

ಶಾಂತಿಯುತ ವಾತಾವರಣ:

ಮುಂಜಾನೆ ಶಾಂತಿಯುತ ವಾತಾವರಣವಿರುವುದರಿಂದ ಇದು ಓದಲು ಸೂಕ್ತ ಸಮಯವಾಗಿದೆ. ವಾತಾವರಣವೂ ಶಾಂತಿಯುತವಾಗಿದಷ್ಟು ನೀವು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ. ಜೊತೆಗೆ ಪರೀಕ್ಷೆಯ ಒತ್ತಡದಿಂದ ದೂರವಿರಬಹುದು.

ತಾಜಾತನ:

ನೀವು ಬೆಳಗ್ಗೆ ಬೇಗ ಏಳುವುದರಿಂದ ದಿನಪೂರ್ತಿ ಉಲ್ಲಾಸದಿಂದ ಇರುತ್ತೀರಿ. ಬೆಳಿಗ್ಗೆ ಪೂರ್ಣ ಏಕಾಗ್ರತೆಯಿಂದ ಓದುವುದರಿಂದ ನೀವು ಓದಿರುವುದು ಮರೆತುಹೋಹುವುದಿಲ್ಲ. ಜೊತೆಗೆ ಮನಸ್ಸು ಕೂಡ ಶಾಂತವಾಗಿರುತ್ತದೆ.

ಇದನ್ನೂ ಓದಿ: 18 ತಿಂಗಳ ಮಗುವಿನ ಕೈಯಲ್ಲಿ ಮೂಡಿದ ಅದ್ಭುತ ಕಲಾಕೃತಿ; ವರ್ಲ್ಡ್ ಬುಕ್ ದಾಖಲೆ ಬರೆದ ಪುಟಾಣಿ

ಜ್ಞಾಪಕಶಕ್ತಿ ಚುರುಕುಗೊಳ್ಳುತ್ತದೆ:

ಬೆಳಗ್ಗೆ ಜಾವದಲ್ಲಿ ನಿಮ್ಮ ಮನಸ್ಸು ಶಾಂತವಾಗಿರುವುದರಿಂದ , ಮೆದುಳಿ ಚುರುಕುಗೊಳ್ಳುತ್ತದೆ. ಇದರಿಂದಾಗಿ ನೀವು ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ.

ಆರೋಗ್ಯಕ್ಕೆ ಲಾಭ:

ಪ್ರತಿದಿನ ಬೆಳಿಗ್ಗೆ ಏಳುವುದು ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ನೀವು ಮಾನಸಿಕವಾಗಿ ಯಾವುದೇ ಒತ್ತಡವಿಲ್ಲದೇ ಆರೋಗ್ಯವಾಗಿರುತ್ತೀರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: