Self Doubt: ಸ್ವಯಂ ಅನುಮಾನ ಎದುರಿಸುವುದು ಹೇಗೆ? ಇಲ್ಲಿದೆ ಸಲಹೆ
ಸ್ವಯಂ ಅನುಮಾನಗಳು ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದರ ಜೊತೆಗೆ, ನಕರಾತ್ಮಕ ಆಲೋಚನೆಗಳನ್ನು ನಮ್ಮೊಳಗೆ ತುಂಬಿಸುತ್ತದೆ. ಕೆಲವು ಬದಲಾವಣೆಗಳ ಮೂಲಕ ಈ ಸ್ವಯಂ ಅನುಮಾನವನ್ನು ದೂರಗೊಳಿಸಬಹುದು.
ನನ್ನಿಂದ ಈ ಕೆಲಸ ಆಗದು, ನಾನು ಇದನ್ನು ಮಾಡಲಾರೆ ಎಂಬೆಲ್ಲಾ ಸ್ವಯಂ ಅನುಮಾನಗಳು, (Self Doubt) ಅದು ನಮ್ಮ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಸ್ವಯಂ ಅನುಮಾನವನ್ನು ಕಡಿಮೆ ಮಾಡುವುದು ಸವಾಲಿನ ಪ್ರಕ್ರಿಯೆಯಾದರೂ ಕೂಡಾ ನಾವು ನಮ್ಮ ಮೇಲಿನ ಸ್ವಯಂ ಅನುಮಾನವನ್ನು ಕಡಿಮೆ ಮಾಡಲು ಸಾಧ್ಯವಿದೆ. ಈ ಕೆಲವೊಂದು ಹಂತಗಳನ್ನು ಪಾಲಿಸುವ ಮೂಲಕ ಸ್ವಯಂ ಅನುಮಾನವನ್ನು ತೆಗೆದುಹಾಕಬಹುದು.
ನಿಮ್ಮ ಸ್ವಯಂ ಅನುಮಾನದ ಮೂಲವನ್ನು ಗುರುತಿಸಿ: ನಿಮ್ಮ ಮೇಲೆ ಯಾವ ಸಂದರ್ಭದಲ್ಲಿ ನೀವು ಅನುಮಾನ ಪಡುತ್ತೀರಾ ಹಾಗೂ ಆ ಅನುಮಾನದ ಮೂಲವನ್ನು ಗುರುತಿಸಿ. ಹೀಗೆ ಮಾಡುವುದರಿಂದ ಅನುಮಾನದಿಂದ ನೀವು ಹೊರಬರಬಹುದು.
ನಿಮ್ಮ ನಕಾರಾತ್ಮಕ ಸ್ವ ಚರ್ಚೆಗೆ ಸವಾಲು ಹಾಕಿ: ಸ್ವಯಂ ಅನುಮಾನದ ಪ್ರಮುಖ ಕಾರಣಗಳಲ್ಲಿ ನರಕಾತ್ಮಕ ಮಾತುಕತೆಯೂ ಒಂದು. ನಿಮ್ಮ ಬಗ್ಗೆ ನೀವು ನಕರಾತ್ಮಕವಾಗಿ ಮಾತನಾಡಿದಾಗ, ಅದು ನಿಮ್ಮ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಮೂಡದಂತೆ ಸಕರಾತ್ಮಕವಾಗಿ ಯೋಚಿಸುತ್ತಾ, ವಾಸ್ತವದಲ್ಲಿ ಜೀವಿಸಿ.
ನಿಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿ: ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳ ಪಟ್ಟಿಯನ್ನು ಮಾಡಿ. ಹಾಗೂ ನೀವು ಸ್ವಯಂ ಅನುಮಾನವನ್ನು ಅನುಭವಿಸಿದಾಗ ಆ ಸಾಮರ್ಥ್ಯದ ಪಟ್ಟಿಯ ಬಗ್ಗೆ ನೆನೆಸಿಕೊಳ್ಳಿ. ಇದು ನಿಮ್ಮ ಸಾಮರ್ಥ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಲು, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Lifestyle: ನೀವು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ ಈ 5 ವಸ್ತುಗಳು ನಿಮ್ಮ ಜೊತೆಯಲ್ಲಿರಲಿ!
ಸ್ವಯಂ ಆರೈಕೆಯನ್ನು ಅಭ್ಯಾಸ ಮಾಡಿ: ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಸ್ವಯಂ ಅನುಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯಿರಿ, ಆರೋಗ್ಯಕರ ಆಹಾರವನ್ನು ಸೇವಿಸಿ. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿ. ಹಾಗೂ ಧ್ಯಾನ, ವ್ಯಾಯಾಮಗಳಲ್ಲಿ ತೊಡಗುವ ಮೂಲಕ ಒತ್ತಡವನ್ನು ನಿವಾರಣೆಯಾಗಿ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ.
ಇತರರಿಂದ ಬೆಂಬಲವನ್ನು ಪಡೆಯಿರಿ: ನಿಮ್ಮ ಸ್ವಯಂ ಅನುಮಾನದ ಬಗ್ಗೆ ವಿಶ್ವಾಸಾರ್ಹ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೂ ನಿಮ್ಮ ಸ್ವಯಂ ಅನುಮಾನಗಳನ್ನು ಕಡಿಮೆ ಮಾಡಿಕೊಳ್ಳಬಹುದು.
Published On - 1:24 pm, Mon, 20 March 23